ಪುತ್ತೂರು: ಮಸ್ಜಿದುರ್ರಹ್ಮ ಪಂಜಳ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್(ಸ.ಅ) ಅವರ 15೦೦ನೇ ಜನ್ಮ ದಿನಾಚರಣೆ ಪ್ರಯುಕ್ತ ಪಂಜಳ ಅಲ್ ಮದ್ರಸತುಲ್ ಇರ್ಫಾನಿಯ್ಯಾ ವಿದ್ಯಾರ್ಥಿಗಳಿಂದ ಮೆಹಿಫಿಲೆ ಎ ಮಿಲಾದ್ ಕಾರ್ಯಕ್ರಮ ಸೆ.14ರಂದು ನಡೆಯಿತು.
ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಳ್ ದುವಾ ನೆರವೇರಿಸಿದರು. ಪಂಜಳ ಮಸ್ಜಿದುರ್ರಹ್ಮ ಮಸೀದಿಯ ಅಧ್ಯಕ್ಷ ಸಂಶುದ್ದೀನ್ ಸಾಲ್ಮರ ಅಧ್ಯಕ್ಷತೆ ವಹಿಸಿದ್ದರು. ಸಾಲ್ಮರ ಮಸೀದಿಯ ಖತೀಬ್ ಉಮರ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಮುಂಡೂರು ಮಸೀದಿಯ ಖತೀಬ್ ಆಸಿಫ್ ಫೈಝಿ ಹಾಗೂ ಕಲ್ಲಗುಡ್ಡೆ ಸದರ್ ಮುಅಲ್ಲಿಂ ಶಾಕಿರ್ ಯಮಾನಿ ಉಪಸ್ಥಿತರಿದ್ದರು. ಸದರ್ ಮುಅಲ್ಲಿಂ ಶರೀಫ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.