ಪುತ್ತೂರು: ಬನ್ನೂರು ನಗರಸಭೆ ವಾರ್ಡ್ 6ರಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು, ನಗರಸಭೆ ಸ್ಥಳೀಯ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ ಅವರು ಕಾಮಗಾರಿ ಪರಿಶೀಲನೆ ಮಾಡಿದರು.
ಬನ್ನೂರು ವಾರ್ಡ್ ನಲ್ಲಿ ಬಹುತೇಕ ಒಳ ರಸ್ತೆಗಳಿಗೆ ನಗರೋತ್ಥಾನ, ನಗರಸಭೆ, ಎಸ್ ಎಫ್ ಸಿ ಸಹಿತ ಹಲವು ಅನುದಾನಗಳನ್ನು ಸದ್ಬಳಕೆ ಮಾಡಿ ಅಭಿವೃದ್ದಿಪಡಿಸಿದ್ದಾರೆ. ಮುಂದಿನ ದಿನ ಬನ್ನೂರು ಆರ್ ಟಿ ಒ ಬಳಿಯಿಂದ ರಸ್ತೆ ಅಭಿವೃದ್ದಿಗೊಳಿಸಲಾಗುವುದು ಎಂದು ಮೋಹಿನಿ ವಿಶ್ವನಾಥ ಗೌಡ ಅವರು ತಿಳಿಸಿದ್ದಾರೆ.