ಪೆರಾಬೆ: ನೂರುಲ್ ಹುದಾ ಮದ್ರಸ ಕೋಚಕಟ್ಟೆ ಇದರ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ.) ತಂಙಳ್ರವರ 15೦೦ನೇ ಜನ್ಮ ದಿನಾಚರಣೆ ಪ್ರಯುಕ್ತ ನೂರೇ ರಬೀಅ್ ಮಿಲಾದ್ ಸಂಗಮ ಸೆ.14ರಂದು ಕೋಚಕಟ್ಟೆ ಮದ್ರಸ ವಠಾರದಲ್ಲಿ ನಡೆಯಿತು.
ಕುಂತೂರು ಮುದರ್ರೀಸ್ ಮೊಯಿದು ಫೈಝಿ ಎಡಪ್ಪಾಲ್ ಇವರ ನೇತೃತ್ವದಲ್ಲಿ ಮೌಲೀದ್ ಮಜ್ಲಿಸ್ ನಡೆಯಿತು. ಮದ್ರಸ ಅಧ್ಯಕ್ಷರಾದ ಹಮೀದ್ ಅಜ್ಮೀರ್ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಸದರ್ ಉಸ್ತಾದ್ ಫಾರೂಕ್ ದಾರಿಮಿ ರೆಂಜ ಉದ್ಘಾಟಿಸಿದರು. ಕುಂತೂರು ಹೆಚ್.ಐ.ಮದ್ರಸ ಸದರ್ ಉಸ್ತಾದ್ ಹಾಶೀಂ ರಹ್ಮಾನಿ, ಕೋಲ್ಪೆ ಸದರ್ ಉಸ್ತಾದ್ ಹನೀಫ್ ದಾರಿಮಿ ಶುಭಹಾರೈಸಿದರು. ಮದ್ರಸ ಜೊತೆ ಕಾರ್ಯದರ್ಶಿ ಫಯಾಝ್ ಝೆಡ್ ಬಿ ಸ್ವಾಗತಿಸಿದರು.


ನಂತರ ಮದ್ರಸ ವಿದ್ಯಾರ್ಥಿಗಳಿಂದ ಕಲಾ ಸಾಹಿತ್ಯ ಸ್ಪರ್ಧೆ, ಪುಟಾಣಿ ಮಕ್ಕಳಿಂದ ಪ್ಲವರ್ ಶೋ ಹಾಗೂ ಕುಂತೂರು ದರ್ಸ್ ವಿದ್ಯಾರ್ಥಿಗಳಿಂದ ಕವಾಲಿ ಕಾರ್ಯಕ್ರಮ ನಡೆಯಿತು. ಕುಂತೂರು ಮುದರ್ರಿಸ್ ಮೊಯಿದು ಫೈಝಿ ಉಸ್ತಾದ್ರವರು ಮುಖ್ಯ ಪ್ರಭಾಷಣ ನೀಡಿದರು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ, ಕಲಿಕೆ ಹಾಗೂ ಹಾಜರಾತಿಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಂತೂರು ಜಮಾಅತ್ನ ಅಧ್ಯಕ್ಷರಾದ ಹಸೈನಾರ್ ಹಾಜಿ ಚಾಲ್ಕರೆ, ಸುರುಳಿ ಜಮಾಅತ್ನ ಅಧ್ಯಕ್ಷರಾದ ಆಲಿಕುಂಞಿ ಸುರುಳಿ, ಇಮಾಂ ಹಸೈನಾರ್ ಫೈಝಿ, ಕುಂತೂರು ಹೆಚ್.ಐ.ಮದ್ರಸ ಸದರ್ ಉಸ್ತಾದ್ ಹಾಶೀಂ ರಹ್ಮಾನಿ ಹಾಗೂ ಇತರ ಉಸ್ತಾದರು, ಕುಂತೂರು ಜಮಾಅತ್ನ ಸದಸ್ಯರು, ಕೋಚಕಟ್ಟೆ ಮದ್ರಸದ ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಅನ್ನದಾನ ಮಾಡಲಾಯಿತು.