ಅ.16ರಿಂದ 19ರವರೆಗೆ ಸುಭದ್ರಾ ಕಲ್ಯಾಣ ಮಂಟಪದಲ್ಲಿ “ ದಿವ್ಯ ಸಮಾಜ ನಿರ್ಮಾಣ ಶಿಬಿರ”

0

ಪುತ್ತೂರು: ಜೈ ಗುರುದೇವ್, ಆರ್ಟ್ ಆಫ್ ಲಿವಿಂಗ್ ಪುತ್ತೂರು ವತಿಯಿಂದ ಅಕ್ಟೋಬರ್ 16ರಿಂದ 19ರವರೆಗೆ “ ದಿವ್ಯ ಸಮಾಜ ನಿರ್ಮಾಣ ಶಿಬಿರ –DSN ಶಿಬಿರ “ ಪುತ್ತೂರು ಮುಕ್ರಂಪಾಡಿ ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ನಮ್ಮಲ್ಲಿ ದಿವ್ಯತೆ ಅರಳಿದಾಗ ಮಾತ್ರ ಬೇರೆಯವರ ಜೀವನದಲ್ಲಿ ದಿವ್ಯತೆಯನ್ನು ತರಬಹುದು, ನಮ್ಮಲ್ಲಿ ಸಂತೋಷ ವಿದ್ದಾಗ ಮಾತ್ರ ಬೇರೆಯವರ ಜೀವನದಲ್ಲಿ ಸಂತೋಷ ವನ್ನು ತರಬಹುದು.ನಮ್ಮಲ್ಲಿರುವ ಭಯ, ಹೆದರಿಕೆ, ಆತಂಕ, ಅಂಜಿಕೆ, ನಕಾರಾತ್ಮಕ ಗುಣಗಳನ್ನು ಹೊರಗೆ ಹಾಕಿ ನಮ್ಮ ಸುತ್ತಲಿನ ಪರಿಸ್ಥಿತಿಯಲ್ಲಿ ನಾವೊಂದು ನಾಯಕ ನಾಗಿ ಇರಲು ಈ ಶಿಬಿರ ತುಂಬಾ ಸಹಾಯಕ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಅಕ್ಟೋಬರ್ 16ರ ಸಂಜೆ ಗಂಟೆ 6. 00ರವರೆಗೆ ನೊಂದಾವಣೆಗೆ ಅವಕಾಶ ನೀಡಲಾಗಿದೆ.ನೋಂದಣಿಗೆ https://aolt.in/911786 ಈ ಲಿಂಕ್‌ ಮೂಲಕ ನೊಂದಾಯಿಸಿಕೊಳ್ಳಬಹುದು.
ನೋಂದಣಿಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಕಿಸಲು
ಶರಾವತಿ : 9844193255
ಸುಧಾ ಹೆಬ್ಬಾರ್ : 9480198876
ಸತ್ಯವತಿ : 9448585966
ಕುಮಾರ ಸುಬ್ರಹ್ಮಣ್ಯ : 9448500948

LEAVE A REPLY

Please enter your comment!
Please enter your name here