ಪುತ್ತೂರು: ಸುಮಾರು ಮೂರು ವರುಷಗಳಿಂದ ಅನೇಕ ವಿದ್ಯಾರ್ಥಿಗಳಿಗೆ NEET /CET ಸ್ಪರ್ಧಾತ್ಮಕ ತರಬೇತಿ ನೀಡುವುದರ ಜೊತೆಗೆ ಉನ್ನತ ಶಿಕ್ಷಣದ ಮಾಹಿತಿ, ಭಾಷಣ ಮತ್ತು ನಿರ್ವಹಣೆ ತರಬೇತಿ, ವಿದ್ಯಾರ್ಥಿವೇತನ ಹಾಗೂ ಇನ್ನಿತರ ಕ್ಯಾಂಪ್ ಗಳನ್ನು ಮಾಡುತ್ತ ಬಂದಿರುವ ನಗರದ ಪ್ರತಿಷ್ಠಿತ ಪ್ರೇರಣಾ ಸಂಸ್ಥೆ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಲಕ್ಷ್ಮಿ ಪೂಜೆಯನ್ನು ಕೇಕಣಾಜೆ ಕೇಶವ ಭಟ್ ತಂತ್ರಿಗಳು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪ್ರೇರಣಾ ಸಂಸ್ಥೆಯ ಅಧ್ಯಕ್ಷ ಮುರಳೀಧರ ಕೆ ಎಲ್, ಕಾರ್ಯನಿರ್ವಾಹಕ ನಿರ್ದೇಶಕಿ ಮೋಕ್ಷಿತ ಮಿಥುನ್, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ ಮತ್ತು ನಾಗೇಶ್ ಕೆಡೆಂಜಿ, ಪ್ರಬಂಧಕರಾದ ದಯಾಮಣಿ ಕೆ., ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು, ನಿರ್ದೇಶಕರು ಹಾಗೂ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ನಿ. ಅಧ್ಯಕ್ಷ ಪುತ್ತೂರು ಚಿದಾನಂದ ಬೈಲಾಡಿ ಹಾಗೂ ಪ್ರೇರಣಾ ಸಂಸ್ಥೆಯ ಸಿಬ್ಬಂದಿ ಸರಿತ, ಜ್ಯೋತಿ ಎಲೆಕ್ಟ್ರಿಕಲ್‌ನ ಮಾಲಕ ಲಿಂಗಪ್ಪ ಗೌಡ ತೆಂಕಿಲ, ಪ್ರಭು ಬಿಲ್ಡಿಂಗ್‌ನ ಮಾಲಕ ನಾಗೇಶ್ ಕೆ, ಪ್ರಸನ್ನ ಪ್ರಿಂಟರ್ಸ್ನ ಮಾಲಕರ ಗುರುರಾಜ್ , ವೈವಿದ್ಯ ಇಂಟೀರಿಯರ್ಸ್‌ನ ಮಾಲಕ ಯಶೋಧ್ ಮತ್ತು ವಿದ್ಯಾ ಯಶೋಧ್,ಸ್ವಾತಿ ಬ್ಯೂಟಿಪಾರ್ಲರ್ ಮಾಲಕಿ ಸ್ವಾತಿ,ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಬಂಧಕ ಗಣೇಶ್ ನಾಯ್ಕ್ ಹಾಗೂ ಸಿಬ್ಬಂದಿಗಳು, ಭಗವತಿ ಎಲೆಕ್ಟ್ರಿಕಲ್ಸ್ ಮಾಲಕರು ಲೋಕೆಂದರ್ ಮೊದಲದವರು ಉಪಸ್ಥಿತರಿದ್ದರು.