ಪುತ್ತೂರು: ಆಟೋ ರಿಕ್ಷಾವೊಂದರ ಇಂಜಿನ್ ಬಳಿ ಬೆಂಕಿ ಕಾಣಿಸಿಕೊಂಡು ನಷ್ಟ ಸಂಭವಿಸಿದ ಘಟನೆ ಸೆ.16ರಂದು ಮುಕ್ರಂಪಾಡಿ ಸಮೀಪ ನಡೆದಿದೆ.

ಹಂಝ ಎಂಬವರು ತನ್ನ ರಿಕ್ಷಾವನ್ನು ಸ್ಟಾರ್ಟ್ ಮಾಡುವ ವೇಳೆ ರಿಕ್ಷಾದ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಅವರು ಮಾಡಿದ್ದರು. ಆದರೂ ಇಂಜಿನ್ ಬಳಿಯ ಕೆಲವು ಪಾರ್ಟ್ಸ್ಗಳು ಹೊತ್ತಿ ಉರಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.