ಸೆ.22ರಿಂದ ಅ.1 : ಶ್ರೀ ಕ್ಷೇತ್ರ ಗೆಜ್ಜೆಗಿರಿ, ನವರಾತ್ರಿ ಉತ್ಸವ ಭಜನಾ ಸಂಕೀರ್ತನೆ, ವಿಶೇಷ ಅಲಂಕಾರ ಪೂಜೆ

0

ಬಡಗನ್ನೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿಬೈದೈತಿ, ಕೋಟಿ-ಚೆನ್ನಯ ಮೂಲಸ್ಥಾನ

ನಂದನಬಿತ್ತಲ್, ಶ್ರೀ ಕ್ಷೇತ್ರದಲ್ಲಿ  ಸೆ.22 ಸೋಮವಾರ ಮೊದಲ್ಗೊಂಡು ಅ.1 ಬುಧವಾರದ ತನಕ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಿಶೇಷ ಭಜನಾ ಸಂಕೀರ್ತನೆಯೊಂದಿಗೆ ನವರಾತ್ರಿ ಉತ್ಸವ ಜರಗಲಿರುವುದು.

ನವರಾತ್ರಿ ಉತ್ಸವದಲ್ಲಿ ವಿಶೇಷ ಅಲಂಕಾರ ಪೂಜೆ, ಅನ್ನದಾನ ಸೇವೆ, ನವರಾತ್ರಿ ಪೂಜೆ, ವಾಹನ ಪೂಜೆ ಹಾಗೂ ಹಾಗೂ ಅಕ್ಷರಾಭ್ಯಾಸವು ನಡೆಯಲಿರುವುದು.

ಭಕ್ತಾಭಿಮಾನಿಗಳಾದ ತಾವೂ ತನು-ಮನ-ಧನಗಳಿಂದ ಸಹಕರಿಸಿ ಸರ್ವ ಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗುವಂತೆ .ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here