ಬಡಗನ್ನೂರು: 2025-26ನೇ ಸಾಲಿನ ಗ್ರಾಮ ಸಮೃದ್ಧಿ ಸ್ಥಿತಿಸ್ಥಾಪಕತ್ವ ಯೋಜನೆ ಪೂರ್ವಭಾವಿ ಸಭೆಯು ಸೆ.22ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆರಲಿದೆ.
ಗ್ರಾಮ ಸಮೃದ್ಧಿ ಯೋಜನೆ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಭಾಗವಾಗಿದ್ದು ಸಮುದಾಯದ ಅಗತ್ಯತೆಗಳನ್ನು ಗುರುತಿಸಿ ಬಡತನ ನಿರ್ಮೂಲನೆ ಮಾಡುವ ಯೋಜನೆಯಾಗಿದೆ ಮತ್ತು ಗ್ರಾಮದ ವಾರ್ಡ್ ಮಟ್ಟದ ನಕ್ಷೆಯನ್ನು ತಯಾರಿಸಲಾಗುವುದು.
ಈ ಸಭೆಗೆ ಒಕ್ಕೂಟದ ಅಧ್ಯಕ್ಷರು /ಕಾರ್ಯದರ್ಶಿ, ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯವರು, ಆರೋಗ್ಯ ಕೇಂದ್ರದ ಸಿಹೆಚ್ಒಗಳು, ಆಶಾ ಕಾರ್ಯಕರ್ತೆರು ಕಡ್ಡಾಯವಾಗಿ ಹಾಜರಾಗುವಂತೆ ಗ್ರಾ.ಪಂ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.