ಪುತ್ತೂರು: ಬದ್ರಿಯಾ ಜುಮಾ ಮಸೀದಿ ಜಮಾಅತ್ ವ್ಯಾಪ್ತಿಗೊಳಪಟ್ಟ ದಾರಂದಕುಕ್ಕು ಡಾ|| ನದೀಮ್ ಡಿ.ಕೆ. ರವರಿಗೆ ಜುಮಾ ನಮಾಝಿನ ಬಳಿಕ ಜಮಾಅತ್ ಕಮಿಟಿ ಮತ್ತು ಈದ್ ಮಿಲಾದ್ ಸಮಿತಿ ವತಿಯಿಂದ ಸನ್ಮಾನ ನಡೆಸಿಲಾಯಿತು.
ಸಣ್ಣ ಪ್ರಾಯದಿಂದಲೇ ಕಲಿಕೆಯಲ್ಲಿ ಮುಂಚೂಣಿಯಲ್ಲಿದ್ದ ನದೀಂ ಅವರು ಮಡಿಕೇರಿಯ ಕೊಡಗು ಇನ್ಸ್ಟಿಟ್ಯೂಶನ್ ಆಫ್ ಮೆಡಿಕಲ್ ಸೈನ್ಸ್ ಅಲ್ಲಿ MBBS ಪದವಿ ಪೂರ್ತಿಗೊಳಿಸಿದ್ದು, ಪ್ರಸ್ತುತ ಇಂಟರ್ನ್ಸಶಿಪ್ ನಡೆಸುತ್ತಿದ್ದಾರೆ. ಇವರು ದಾರಂದಕ್ಕು ನಿವಾಸಿ ಉದ್ಯಮಿ ಹಂಝ ಹಾಜಿ ಡಿಕೆ ಮತ್ತು ನಸೀಮಾ ಡಿಕೆ ಅವರ ಸುಪುತ್ರರಾಗಿದ್ದಾರೆ.