ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಹಜ್ ಮತ್ತು ಪೌರಾಡಳಿತ ಸಚಿವರಾದ ರಹೀಂ ಖಾನ್ ಅವರು ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಪುತ್ತೂರಿಗೆ ಭೇಟಿ ನೀಡಿದ್ದ ಸಚಿವರು ಕಾರ್ಯಕ್ರಮ ಮುಗಿಸಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು.
ಶಾಸಕ ಅಶೋಕ್ ರೈ ಹಾಗೂ ಬ್ಲಾಕ್ ಅಧ್ಯಕ್ಣ ಕೆ ಪಿ ಆಳ್ವರು ಸಚಿವರನ್ನು ಬರಮಾಡಿಕೊಂಡರು. ಈ ವೇಳೆ ಪಕ್ಷದ ಮುಖಂಡರಾದ ಶ್ಯಾಂ ಸುಂದರ್ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಝೀರ್ಮಠ,ಗಿರೀಶ್ ಸಂಟ್ಯಾರ್ ರಹಿಮಾನ್ ಸಂಟ್ಯಾರ್, ಪ್ರವೀಣ್ ಆಚಾರ್ಯ ಮುಂಡೂರು ,ಸುಳ್ಯ ಕಾಂಗ್ರೆಸ್ ಮುಖಂಡ ಟಿ ಎಂ ಶಹೀದ್. ಸಲಾಂ ಸಂಪ್ಯ,ಮಹಿಳಾ ಕಾಂಗ್ರೆಸ್ ನ ಬದ್ರು, ರೇವತಿ ಉಪಸ್ಥಿತರಿದ್ದರು.