ನೆಲ್ಯಾಡಿ: ಬಲ್ಯ ಗ್ರಾಮದ ನೇರೊಳ್ತಡ್ಕ ನಿವಾಸಿ, ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ನೌಕರ ಬಾಬುಗೌಡ ಎನ್.(85ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಸೆ.24ರಂದು ನಿಧನರಾದರು.

ಬಾಬು ಗೌಡ ಅವರು ಸುಮಾರು 25 ವರ್ಷ ಲೋಕೋಪಯೋಗಿ ಇಲಾಖೆಯಲ್ಲಿ ಗ್ಯಾಂಗ್ಮ್ಯಾನ್ ಆಗಿ ಕೆಲಸ ನಿರ್ವಹಿಸಿ ಬಳಿಕ 1990ರಲ್ಲಿ ಆರೋಗ್ಯ ಇಲಾಖೆಗೆ ವರ್ಗಾವಣೆಗೊಂಡು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ದರ್ಜೆಯ ನೌಕರರಾಗಿ ಸೇವೆ ಸಲ್ಲಿಸಿದ್ದರು. ಇಲ್ಲಿ ಸುಮಾರು 10 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ನೆಲ್ಯಾಡಿ ಮೊಬೈಲ್ ಮ್ಯಾಟ್ರಿಕ್ಸ್ ಮಾಲಕ ವಿಶ್ವನಾಥ ಗೌಡ ಸಹಿತ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.