ಪೆರಾಬೆ: ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 23-9-2025ರಿಂದ 22-9-2026ರ ತನಕ ಹಸಿ ಮೀನು ಮಾರಾಟದ ಹಕ್ಕಿನ ಬಹಿರಂಗ ಮರು ಏಲಂ ಪ್ರಕ್ರಿಯೆ ಸೆ.22ರಂದು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.

ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ಮರು ಏಲಂ ಪ್ರಕ್ರಿಯೆ ನಡೆಯಿತು. ಪಿಡಿಒ ಶಾಲಿನಿ ಕೆ.ಬಿ.ಅವರು ಏಲಂ ಪ್ರಕ್ರಿಯೆ ನಡೆಸಿದರು. ಸುಮಾರು 23 ಮಂದಿ ಬಿಡ್ಡುದಾರರು ಭಾಗವಹಿಸಿದ್ದು, ರೂ.6,78,100ಕ್ಕೆ ಯು.ಕೆ.ಸಿದ್ದೀಕ್ ಉಪ್ಪಿನಂಗಡಿ ಅವರಿಗೆ ಖಾಯಂ ಆಗಿದೆ. ಕಳೆದ ವರ್ಷ 4,00,100 ರೂ.ಗೆ ಹಸಿ ಮೀನು ಮಾರಾಟದ ಹಕ್ಕಿನ ಏಲಂ ಆಗಿತ್ತು. ಈ ಬಾರಿ ನಡೆದ ಏಲಂ ಪ್ರಕ್ರಿಯೆಯಲ್ಲಿ ಬಿಡ್ಡುದಾರರಾಗಿ ರಿಯಾಝ್ ಕೋಚಕಟ್ಟೆ, ಅಶ್ರಫ್ ಕೋಚಕಟ್ಟೆ, ಇಸ್ಮಾಯಿಲ್ ಕಡಬ, ಮಹಮ್ಮದ್ ಹಾರೀಸ್ ಕಡಬ, ಅಬ್ದುಲ್ ಖಾದರ್ ಮರ್ದಾಳ, ನೌಶಾದ್ ಕೋಚಕಟ್ಟೆ, ಅಶ್ರಫ್ ಕೋಚಕಟ್ಟೆ, ಇಸ್ಮಾಯಿಲ್ ಎ.ಕೆ.ಕುಂತೂರು, ಅಬ್ದುಲ್ ಖಾದರ್ ಪೆರಾಬೆ, ನಾರಾಯಣ ಅಮೈ ಸವಣೂರು, ಜುಬೈರ್ ಬೇಳ್ಪಾಡಿ, ಅಫೀದ್ ಕೋಚಕಟ್ಟೆ, ಮುಸ್ತಫಾ ಉಪ್ಪಿನಂಗಡಿ, ಸಂತೋಷ್ ಮನವಳಿಕೆ, ಯು.ಕೆ.ಸಿದ್ದೀಕ್ ಉಪ್ಪಿನಂಗಡಿ, ಮುಸ್ತಾಹಿನ್ ಕೆಂಪಿ, ಶಬ್ಬೀರ್ ಕೆಂಪಿ, ಎಂ.ಇಬ್ರಾಹಿಂ ಉಪ್ಪಿನಂಗಡಿ, ಅಶ್ರಫ್ ಕಡಬ, ಅಜರುದ್ದೀನ್ ಉಪ್ಪಿನಂಗಡಿ, ಸತೀಶ್ ಕೊಯಿಲ, ಸುಹೈಲ್ ಬೆಳ್ತಂಗಡಿ, ಹಮೀದ್ ಕೋಚಕಟ್ಟೆ ಬಿಡ್ಡುದಾರರಾಗಿ ಭಾಗವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಸದಾನಂದ ಕುಂಟ್ಯಾನ, ಸುಶೀಲ, ಮಮತಾ ಅಂಬರಾಜೆ, ಫಯಾಝ್ ಸಿ.ಎಮ್., ಚಂದ್ರಶೇಖರ ರೈ ಅಗತ್ತಾಡಿ, ಮೋಹನ್ ದಾಸ್ ರೈ, ಮೇನ್ಸಿಸಾಜನ್, ಲೀಲಾವತಿ ಉಪಸ್ಥಿತರಿದ್ದರು. ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸೆ.15ರಂದು ಗ್ರಾ.ಪಂ.ನಲ್ಲಿ ನಡೆದ ಹಸಿಮೀನು ಮಾರಾಟದ ಹಕ್ಕಿನ ಬಹಿರಂಗ ಏಲಂ ಪ್ರಕ್ರಿಯೆಯಲ್ಲಿ ರೂ.8 ಲಕ್ಷಕ್ಕೆ ನೌಫಲ್ ಎಂಬವರಿಗೆ ಹಸಿ ಮೀನು ಮಾರಾಟದ ಹಕ್ಕು ಖಾಯಂ ಆಗಿತ್ತು. ಅವರಿಗೆ ಷರತ್ತಿನಂತೆ ಏಲಂ ಮೊತ್ತದ ಶೇ.50ರಷ್ಟು ಹಣವನ್ನು ಏಲಂ ದಿನವೇ ಸಂಜೆ 5 ಗಂಟೆಯೊಳಗೆ ಪಾವತಿಸುವಂತೆ ಸೂಚಿಸಲಾಗಿತ್ತು. ಆದರೆ ಅವರು ಮೊತ್ತ ಪಾವತಿಸದೇ ಇದ್ದ ಹಿನ್ನೆಲೆಯಲ್ಲಿ ಏಲಂ ರದ್ದುಗೊಳಿಸಿ ಸೆ.22ರಂದು ಮರು ಏಲಂ ಕರೆಯಲಾಗಿತ್ತು.