ಅಡಿಕೆ ಕೊಳೆರೋಗ ಪರಿಹಾರ ಕುರಿತು ಸರಕಾರಕ್ಕೆ ಬರೆಯಲು ನಿರ್ಣಯ
ಬಡಗನ್ನೂರು: ಅಡಿಕೆ ಕೊಳೆರೋಗ ಪರಿಹಾರ ಸರಕಾರಕ್ಕೆ ಬರೆಯಲು ಬಡಗನ್ನೂರು ಗ್ರಾ. ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೖೆಗೂಳ್ಳಲಾಯಿತು.ಸಭೆಯು ಗ್ರಾ. ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ಸೆ. 22 ರಂದು ಗ್ರಾ. ಪಂ ಸಭಾಂಗಣದಲ್ಲಿ ನಡೆಯಿತು.
ದ. ಕ ಜಿಲ್ಲೆಯಲ್ಲಿ ಅಡಿಕೆ ಕೃಷಿ ಪ್ರಮುಖ ಬೆಳೆಯಾಗಿದ್ದು ಈ ಭಾರಿ ವಿಪರೀತ ಮಳೆಯಿಂದ ಅಡಿಕೆ ತೋಟಕ್ಕೆ ಕೊಳೆರೋಗ ಬಾಧೆಯಿಂದ ಶೇಕಡಾ 80ರಷ್ಟು ನಷ್ಟ ಸಂಭವಿಸಿ ಕೃಷಿಕರು ಕಂಗಲಾಗಿದ್ದಾರೆ. ಈ ಬಗ್ಗೆ ಪರಿಹಾರ ನೀಡುವಂತೆ ಸರಕಾರಕ್ಕೆ ಪತ್ರ ಬರೆಯಲು ಸದಸ್ಯ ಸಂತೋಷ ಆಳ್ವ ಸಭೆಯಲ್ಲಿ ಆಗ್ರಹಿಸಿದರು. ಇವರೊಂದಿಗೆ ಸದಸ್ಯರಾದ ಕಲಾವತಿ ಗೌಡ ಪಟ್ಲಡ್ಕ, ರವಿರಾಜ ರೖೆ ಸಜಂಕಾಡಿ, ರವಿಚಂದ್ರ ಸಾರೆಪ್ಪಾಡಿ, ವೆಂಕಟೇಶ್ ಕನ್ನಡ್ಕ ದ್ವನಿಗೂಡಿಸಿದರು. ಈ ಬಗ್ಗೆ ಚರ್ಚಿಸಿ ಸರ್ವಸದಸ್ಯರ ಒಮ್ಮತದಲ್ಲಿ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ ಕೖೆಗೊಳ್ಳಲಾಯಿತು.
ಕೆಂಪು ಕಲ್ಲು ಮತ್ತು ಮರುಳು ಸಮಸ್ಯೆಯಿಂದ ಪಂಚಾಯತ್ ವಸತಿ ಯೋಜನೆಯಡಿ ಮಂಜೂರುಗೊಂಡ ಪಲಾನುಭವಿಗಳಿಗೆ ಮನೆ ನಿರ್ಮಾಣ ಮಾಡುವಲ್ಲಿ ಅಡ್ಡಿ ಉಂಟಾಗಿದೆ ಕೆಂಪು ಕಲ್ಲು ದರ ಮುಗಿಲು ಮುಟ್ಟಿದ್ದು ಕಲ್ಲು ಒಂದರ ಧರ ರೂಪಾಯಿ 42 ಆಗಿದ್ದು ಇದರಿಂದ ಬಡವರಿಗೆ ವಸತಿ ನಿರ್ಮಾಣ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಮತ್ತು 15 ಹಣಕಾಸು ಯೋಜನೆಯಲ್ಲಿ ಕ್ರಿಯಾಯೋಜನೆ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕೆಂಪು ಕಲ್ಲು ಮತ್ತು ಮರಳು ಬಗ್ಗೆ ಕಾನೂನು ಸಡಿಕೆ ಮಾಡುವಂತೆ ಸರಕಾರಕ್ಕೆ ಬರೆಯಲು ಸದಸ್ಯ ಲಿಂಗಪ್ಪ ಗೌಡ ಒತ್ತಾಯಿಸಿದರು. ಇವರೊಂದಿಗೆ ಸಂತೋಷ ಆಳ್ವ ಗಿರಿಮನೆ ಧ್ವನಿ ಗೂಡಿಸಿದರು. ಬಳಿಕ ಚರ್ಚಿಸಿ ಸರಕಾರಕ್ಕೆ ಪತ್ರ ಬರೆಯಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಆಳ್ವ ಗಿರಿಮನೆ, ಕುಮಾರ ಅಂಬಟೆಮೂಲೆ, ಧರ್ಮೆಂದ್ರ ಕುಲಾಲ್ ಪದಡ್ಕ, ವೆಂಕಟೇಶ್ ಕನ್ನಡ್ಕ, ಲಿಂಗಪ್ಪ ಮೋಡಿಕೆ, ರವಿಚಂದ್ರ ಸಾರೆಪ್ಪಾಡಿ, ವಸಂತ ಗೌಡ ಕನ್ನಯ, ಕಲಾವತಿ ಗೌಡ ಪಟ್ಲಡ್ಕ, ಸವಿತಾ ನೇರೋಳ್ತಡ್ಕ, ಹೇಮಾವತಿ ಮೋಡಿಕೆ ಜ್ಯೋತಿ ಅಂಬಟೆಮೂಲೆ, ದಮಯಂತಿ ಕೆಮನಡ್ಕ, ಉಪಸ್ಥಿತರಿದ್ದರು.
ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಬಿ. ಕೆ ಸುಬ್ಬಯ್ಯ ಸಾರ್ವಜನಿಕ ಮತ್ತು ಸರಕಾರಿ ಸುತ್ತೋಲೆಗಳನ್ನು ಸಭೆಯಲ್ಲಿ ಓದಿದರು.ಕಾರ್ಯದರ್ಶಿ ಕೊರಗಪ್ಪ ನಾಯ್ಕ ಸ್ವಾಗತಿಸಿ, ವಂದಿಸಿದರು ಸಿಬ್ಬಂದಿಗಳು ಸಹಕರಿಸಿದರು.
ಬಡಗನ್ನೂರು ಗ್ರಾ. ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಕನ್ನಡ್ಕ ಮನೆ ನಿವೇಶನ ಲೇಔಟ್ ತಾಲೂಕಿನಲ್ಲಿ ಮೊಡೇಲ್ ನಿರ್ಮಾಣ ಮಾಡಲಾಗವುದು. ಈಗಾಗಲೇ ಲೇಔಟ್ ರಸ್ತೆ ಕಾಂಕ್ರೀಟ್ 70ಲಕ್ಷ ರೂ, ಅನುದಾನ ಮಂಜೂರು ಮಾಡಲಾಗಿದೆ. ಉಳಿದಂತೆ ಕುಡಿಯುವ ನೀರು ಮತ್ತು ಲೇಔಟ್ ಪ್ರತ್ಯಕ್ಷ ಅನುದಾನ ಮಂಜೂರಾತಿ ಮಾಡಿ ತಾಲೂಕಿನಲ್ಲಿ ಮಾದರಿಯಾಗಿ ನಿರ್ಮಾಣ ಮಾಡಲಾಗುವುದು ಎಂದು ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಶಾಸಕರು ತಿಳಿಸಿದ್ದಾರೆ ಎಂದು ಪಿಡಿಒ ಬಿ. ಕೆ ಸುಬ್ಬಯ್ಯ ನಭೆಯಲ್ಲಿ ಹೇಳಿದರು.