ಪುತ್ತೂರು: ʼಶ್ರೀ ಮಧೂರು ಮದನಂತೇಶ್ವರ ಮಹಾ ಗಣಪತಿʼ ಆಡಿಯೋ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಮಧೂರು ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರ ಸಮ್ಮುಖದಲ್ಲಿ ಸೆ.28ರಂದು ನಡೆಯಿತು.
ನಿರ್ಮಾಪಕರಾದ ಮೋಹನ್ ನೆಲ್ಲಿಗುಂಡಿ, ಗಾಯಕರು ಅಣ್ಣು ತಿಂಗಳಾಡಿ, ಸುರೇಶ್ ಆರ್ಯಾಪು ಸಂಪ್ಯ, ಸಾಹಿತ್ಯ ಶಿವ ಕರ್ನೂರು ಗುತ್ತು ಮತ್ತು ಪ್ರಮುಖರು ಉಪಸ್ಥಿತರಿದ್ದು, ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಗೊಳಿಸಿದರು.