ನಾಳೆ(ಸೆ.30) ತಿಂಗಳಾಡಿ ನವೋದಯ ರಿಕ್ಷಾ ಚಾಲಕ ಮಾಲಕರ ಸಂಘದ ಆಶ್ರಯದಲ್ಲಿ ಬೀಳ್ಕೊಡುಗೆ ಸಮಾರಂಭ, ದರಪಟ್ಟಿ ಬಿಡುಗಡೆ ಕಾರ್ಯಕ್ರಮ

0

ಪುತ್ತೂರು: ನವೋದಯ ರಿಕ್ಷಾ ಚಾಲಕ, ಮಾಲಕರ ಸಂಘ ತಿಂಗಳಾಡಿ ಇದರ ಆಶ್ರಯದಲ್ಲಿ ಕೆದಂಬಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ರಿಕ್ಷಾ ಬಾಡಿಗೆ ದರಪಟ್ಟಿ ಬಿಡುಗಡೆ ಕಾರ್ಯಕ್ರಮ ಸೆ.30ರಂದು ಅಪರಾಹ್ನ ಗಂಟೆ 3.3೦ಕ್ಕೆ ಸರಿಯಾಗಿ ಕೆದಂಬಾಡಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯುಲಿದೆ.
ನವೋದಯ ರಿಕ್ಷಾ ಚಾಲಕ, ಮಾಲಕರ ಸಂಘ ತಿಂಗಳಾಡಿ ಇದರ ಅಧ್ಯಕ್ಷ ವಿಠಲ ರೈ ಮಿತ್ತೋಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ನವೋದಯ ರಿಕ್ಷಾ ಚಾಲಕ, ಮಾಲಕರ ಸಂಘ ತಿಂಗಳಾಡಿ ಇದರ ಗೌರವಾಧ್ಯಕ್ಷ ಕೃಷ್ಣಕುಮಾರ್ ರೈ ಗುತ್ತು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಎಸ್ಸೈ ಜಂಬುರಾಜ್ ಮಹಾಜನ್, ತಿಂಗಳಾಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ರೈ ಮಠ, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷೆ ಸುಜಾತ ಕೆದಂಬಾಡಿ, ಪತ್ರಕರ್ತರಾದ ಯೂಸುಫ್ ರೆಂಜಲಾಡಿ ಹಾಗೂ ಸಿಶೇ ಕಜೆಮಾರ್, ತಿಂಗಳಾಡಿ ಮಸೀದಿಯ ಅಧ್ಯಕ್ಷ ಸಿದ್ದೀಕ್ ತಿಂಗಳಾಡಿ, ತಿಂಗಳಾಡಿ ವರ್ತಕರ ಸಂಘದ ಅಧ್ಯಕ್ಷ ವಿಜಯ ರೈ ಸಣಂಗಳ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ನವೋದಯ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here