ಪುತ್ತೂರು:ಅ.20 ರಂದು ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ &ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ಅಶೋಕ ಜನ -ಮನ 2025 ರ ಪ್ರಯುಕ್ತ ಗ್ರಾಮ ಭೇಟಿ ಕಾರ್ಯಕ್ರಮ ಸೆ.29ರಂದು ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ಜರುಗಿತು.

ಕೋಲ್ಪೆ ಷಣ್ಮುಖ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಭಟ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರಾದ ಜಯಪ್ರಕಾಶ್ ಬದಿನಾರು ವಿಷಯ ಪ್ರಸ್ತಾಪಿಸಿದರು.
ಹಿರಿಯರಾದ ಎಂ ಎಸ್ ಮೊಹಮ್ಮದ್, ಪದ್ಮನಾಭ ಪೂಜಾರಿ ಸಣ್ಣಗುತ್ತು ಅಳಿಕೆ, ಕೇಶವ ಭಟ್,ಕಳ್ಳಸರ್ಪೆ, ರಾಮಣ್ಣ ಫೀಲಿಂಜ, ಮೋಹನ್ ಗುರ್ಜಿನಡ್ಕ, ಪ್ರವೀಣ್ ಶೆಟ್ಟಿ ಅಳಕೇಮಜಲು, ಎಲ್ಲಿಯಣ್ಣ ಪೂಜಾರಿ, ಸುರೇಶ್ ಪೂಜಾರಿ ಸೂರ್ಯ, ರಮೇಶ್ ಪೂಜಾರಿ ಸೂರ್ಯ, ಪದ್ಮನಾಭ ಕೊಪ್ಪಳ, ಸಾದಿಕ್ ಅಕ್ಕರೆ, ಹಂಝ ಖಂದಕ್, ಅಜಿಜ್ ಆಸ್ಬಾರ್ಕ್, ಹಂಝ ಮಿತ್ತೂರ್, ಲತೀಫ್ ದಲ್ಕಜೆ, ಶಾಫಿ ಸೂರ್ಯ, ಆದಂ ,, ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನಾಸಿರ್ ಕೋಲ್ಪೆ ಸ್ವಾಗತಿಸಿ, ಪ್ರವೀಣ್ ಪೂಜಾರಿ ಸಣ್ಣಗುತ್ತು ವಂದಿಸಿದರು.