ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದ ಎಸ್ ಐ ಆಂಜನೇಯ ರೆಡ್ಡಿ
ಪುತ್ತೂರು: ನೆಹರುನಗರದಲ್ಲಿ ಸ್ಕೂಟರ್ ವೊಂದಕ್ಕೆ ಲಾರಿಯೊಂದು ಡಿಕ್ಕಿಯಾಗಿ ವಿವೇಕಾನಂದ ಕಾಲೇಜು ಕ್ಯಾಂಟೀನ್ ನಿರ್ವಾಹಕರೊಬ್ಬರು ತೀವ್ರ ಗಾಯಗೊಂಡ ಘಟನೆ ಸೆ.30 ರ ರಾತ್ರಿ ನಡೆದಿದೆ. ಅಪಘಾತ ಸಂಭವಿಸಿದ ಸಂದರ್ಭ ಕರ್ತವ್ಯ ನಿರತ ಜೀಪಿನಲ್ಲಿ ತೆರಳುತ್ತಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್ ಐ ಆಂಜನೇಯ ರೆಡ್ಡಿಯವರು ತಮ್ಮ ಜೀಪಿನಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

ವಿವೇಕಾನಂದ ಕಾಲೇಜು ಕ್ಯಾಂಟೀನ್ ನಿರ್ವಾಹಕ ಬಂಟ್ವಾಳ ಮೂಲದ ನರೇಂದ್ರ ಶೆಣೈ (60ವ)ಅವರು ಗಾಯಾಳು. ಅವರು ರಾತ್ರಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭ ಅವರ ಸ್ಕೂಟರ್ ಹಿಂಬದಿಗೆ ಲಾರಿ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ನರೇಂದ್ರ ಶೆಣೈ ಅವರು ತೀವ್ರ ಗಾಯಗೊಂಡಿದ್ದರು. ಇದೇ ವೇಳೆ ಕರ್ತವ್ಯ ನಿರತ ತೆರಳುತ್ತಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್ ಐ ಆಂಜನೇಯ ರೆಡ್ಡಿಯವರು ತಕ್ಷಣ ಗಾಯಾಳುವನ್ನು ತಮ್ಮ ಜೀಪಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದುರು. ತೀವ್ರ ಗಾಯಗೊಂಡ ನರೇಂದ್ರ ಶೆಣೈ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.