ನೆಲ್ಯಾಡಿ: ಬೆಥನಿ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್‌ನಲ್ಲಿ ಆಯುಧ ಪೂಜೆ ಆಚರಿಸಲಾಯಿತು.

ರೆ.ಫಾ. ಡಾ| ವರ್ಗೀಸ್ ಕೈಪನಡ್ಕ ಒಐಸಿ, ರೆ.ಫಾ. ಜೋರ್ಜ್ ಸ್ಯಾಮುವೆಲ್ ಒಐಸಿ ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿ, ಆಶೀರ್ವಚನ ನೀಡಿದರು.

ದಸರಾ ಹಬ್ಬದ ಸಂದರ್ಭದಲ್ಲಿ ಆಚರಿಸುವ ಒಂದು ಹಬ್ಬ ಆಯುಧ ಪೂಜೆ. ಶ್ರಮಕ್ಕೆ ಗೌರವ, ಶ್ರಮದ ಪಾವಿತ್ರ್ಯತೆ, ಸಂಪ್ರದಾಯದ ಮೌಲ್ಯ, ಒಗ್ಗಟ್ಟು, ಆಧ್ಯಾತ್ಮಿಕತೆ ಈ ಎಲ್ಲಾ ವಿಚಾರಗಳನ್ನ ಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಲ್ಯಾಬ್‌ಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿ ಆಯುಧ ಪೂಜೆಯ ಸಂಪ್ರದಾಯಕ್ಕೆ ಗೌರವ ಸಲ್ಲಿಸಿದರು.
ಪ್ರಾಂಶುಪಾಲ ಸಜಿ ಕೆ. ತೋಮಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತರಬೇತಿ ಅಧಿಕಾರಿ ಜಾನ್ ಪಿ.ಎಸ್. ವಂದಿಸಿದರು.