ಗೌರವಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ಆನೆಮಜಲು
ಪುತ್ತೂರು: ಪಡೀಲ್ನಲ್ಲಿ ಪಿಲಿರಾಧಣ್ಣ ತಂಡದ ಹುಲಿಕುಣಿತ ಆಯೋಜನೆ ಮೂಲಕ ಹೆಸರುವಾಸಿಯಾಗಿರುವ ಸಮೀರ್ ಪಡೀಲ್ ಇವರ ಅಧ್ಯಕ್ಷತೆಯಲ್ಲಿ ಅ.1ರಂದು ಪಡೀಲ್ ಸರ್ಕಲ್ನಲ್ಲಿ ಸಭೆ ನಡೆಸಿ ನೂತನ ‘ಫ್ರೆಂಡ್ಸ್ ಪಡೀಲ್’ ಸಮಿತಿ ರಚಿಸಲಾಯಿತು.
ಫ್ರೆಂಡ್ಸ್ ಪಡೀಲ್ ಸಮಿತಿಯ ನೂತನ ಅಧ್ಯಕ್ಷ, ಕಾರ್ಯದರ್ಶೀಗಳ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ಆನೆಮಜಲು, ಉಪಾಧ್ಯಕ್ಷರಾಗಿ ಮೋಹನ್ ಶೆಟ್ಟಿ ಪಡೀಲ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ನಾಯ್ಕ್ ಪಡೀಲ್, ಜೊತೆ ಕಾರ್ಯದರ್ಶಿಯಾಗಿ ವನೀಶ್ ಬನ್ನೂರು, ಸಂಚಾಲಕರಾಗಿ ಸಮೀರ್ ಪಡೀಲ್, ಕೋಶಾಧಿಕಾರಿ ದಿಲೀಪ್ ಕೆಮ್ಮಾಯಿ, ಕ್ರೀಡಾ ಕಾರ್ಯದರ್ಶಿ ಹರೀಶ್ ಪಕ್ಕಳ, ಜೊತೆ ಕಾರ್ಯದರ್ಶಿ ಪ್ರಜ್ವಲ್ ರೈ ಬನ್ನೂರು ಹಾಗೂ 30 ಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
‘ಫ್ರೆಂಡ್ಸ್ ಪಡೀಲ್’ ಸಮಿತಿಯ ಮೂಲಕ ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನ ನಡೆಸುವ ಬಗ್ಗೆ ಸರ್ವ ಸದಸ್ಯರು ಸೇರಿ ನಿರ್ಧರಿಸಿದರು.