ಪುತ್ತೂರು: ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಮೇನಾಲ ಇಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಶಾಲಾ ಮುಖ್ಯಶಿಕ್ಷಕಿ ಹಾಗೂ ಗೈಡ್ ಕ್ಯಾಪ್ಟನ್ ಪುಷ್ಪಾಲತಾ ರಾವ್‌ರವರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸ್ಕೌಟ್-ಗೈಡ್‌ನ ಮುಖ್ಯ ಅಂಶವಾದ ಸರ್ವ ಧರ್ಮ ಪ್ರಾರ್ಥನೆಯ ಬಗ್ಗೆ ವಿವರಿಸಿದರು.
ಅಡ್ಮಿನ್ ಆಫೀಸರ್ ನಾಸಿರ್ ಮಾತನಾಡಿ ಶಾಲಾ ವಿದ್ಯಾರ್ಥಿಗಳಿಗೆ ಇಂತಹ ಆಚರಣೆಗಳ ಮಹತ್ವವನ್ನು ತಿಳಿಯಪಡಿಸುವುದು ಬಹಳ ಮುಖ್ಯವೆಂದರು. ಶಾಲಾ ವಿದ್ಯಾರ್ಥಿ ನಾಯಕಿ ಮುನಾ ಪ್ರಾರ್ಥನೆ ನಡೆಸಿದರು. ಫ್ಲಾಕ್ ಲೀಡರ್ ಉಮ್ಮುರುಲ್ಲಾರವರು ದಿನದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾ ರೈ ಹಾಗೂ ಜಯಂತಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಚಿತ್ರಾ ಪಿ ವಂದಿಸಿದರು. ಝಹೀರಾ ಕಾರ್ಯಕ್ರಮ ನಿರೂಪಿಸಿದರು.