ಕಡಬ ತಾಲೂಕು ಯಕ್ಷಧ್ರುವ ಪಟ್ಲ ಫೌಂಡೇಶನ್ ಪದಗ್ರಹಣ -ವಿವಿಧ ಧಾರ್ಮಿಕ, ಸಂಸ್ಕೃತಿ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ಸಂಪನ್ನ-25000ಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ
ಆಲಂಕಾರು: ಸೀಮಾ ದೇವಸ್ಥಾನ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ.21ರಿಂದ ಅ.2ರ ತನಕ ನಡೆದಿದ್ದು, ಸೆ.29ರಂದು ಧಾರ್ಮಿಕ ಸಭೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕಡಬ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ, ಯಕ್ಷಗಾನ – ಗಾನ- ವೈಭವ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ ಯಕ್ಷಧ್ರುವ ಪಟ್ಲ ಫೌಂಡೇಶನ್, ವಿಶ್ವ ಯಕ್ಷಧ್ರುವ ಪಟ್ಲ ಫೌಂಡೇಶನ್ ಆಗಬೇಕು, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಕೃತಿಯ ಫೌಂಡೇಶನ್. ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವ ಆಗೋಚರ ಕೆಲಸ ಮಾಡುತ್ತಿದೆ ಎಂದ ಅವರು, ಕಡಬ ತಾಲ್ಲೂಕು ಘಟಕ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲಿ. ವ್ಯಕ್ತಿ ವಿಕಾಸ ಆದರೆ ದೇಶ ವಿಕಾಸವಾಗುತ್ತದೆ. ನಮ್ಮಲ್ಲಿರುವ ಅಜ್ಞಾನದ ಅಂಧಕಾರ ನೀಗಿ ಸುಜ್ಞಾನ ಬೆಳಕನ್ನು ಜಾಗೃತಗೊಳಿಸಬೇಕು. ಮನುಷ್ಯ ಮನುಷ್ಯರಲ್ಲಿ ಪ್ರೀತಿ ಇದ್ದಾಗ ಮಾತ್ರ ಬದುಕು ಒಳ್ಳೆಯದಾಗುತ್ತದೆ. ಮಾತೃಶಕ್ತಿ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆ. ಮನೆಯೇ ಮೊದಲ ಪಾಠ ಶಾಲೆ ತಾಯಿ ಮೊದಲಗುರು. ಆದ್ದರಿಂದ ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಳಿಸಬೇಕು ಎಂದರು. ಬಳಿಕ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ಅದಷ್ಟು ಬೇಗ ಸಮಗ್ರ ಜೀರ್ಣೋದ್ಧಾರಗೊಂಡು
ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನೆರೆವೇರಲಿ ಎಂದು ಶುಭ ಹಾರೈಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಯವರು ಮಾತನಾಡಿ ಶರವೂರಿನ ಈ ಪುಣ್ಯ ಭೂಮಿ ಬ್ರಹ್ಮಕಲಶಕ್ಕೆ ಸಿದ್ದವಾಗುತ್ತಿದೆ. ಶರವೂರು ದುರ್ಗಾಪರಮೇಶ್ವರಿ ಕ್ಷೇತ್ರ ಮಹಾತ್ಮೆ ಯಕ್ಷಗಾನವನ್ನು ಕೂಡ ನಾವು ಇಲ್ಲಿ ಮಾಡಿದ್ದೇವೆ. ಈ ಕ್ಷೇತ್ರದ ಬಗ್ಗೆ ನಮಗೆ ಅಪಾರ ಭಕ್ತಿ ಇದೆ. ಕಟೀಲು ಕ್ಷೇತ್ರದಲ್ಲಿ ನಿರಂತರ ಭಕ್ತಿಯಿಂದ ಸೇವೆ ಮಾಡಿದ ಕಾರಣ ಕಲೆಯಲ್ಲಿ ತೊಡಗಿಸಿಕೊಂಡಿರುವ ಕಲಾವಿದರಿಗೆ ಏನಾದರೂ ಮಾಡಬೇಕೆಂದು ಕಟೀಲು ದುರ್ಗಾಪರಮೇಶ್ವರಿ ದೇವಿ ನನ್ನನು ನೇಮಿಸಿದ್ದಾರೋ ಎಂಬ ಚಿಂತನೆ ನನ್ನ ಮನಸ್ಸಿನಲ್ಲಿ ಬರುತ್ತಿದೆ. ಕಳೆದ 10 ವರ್ಷಗಳಲ್ಲಿ 15 ಕೋಟಿ ರೂಪಾಯಿ ಎಲ್ಲಾ ದಾನಿಗಳ ನೆರವಿನೊಂದಿಗೆ ಫೌಂಡೇಶನ್ ವತಿಯಿಂದ ಸಹಕಾರ ನೀಡಲು ಸಾಧ್ಯವಾಗಿದೆ. ಇವತ್ತು ಪಟ್ಲ ಫೌಂಡೇಶನ್ 45 ಘಟಕಗಳು ಸಾವಿರಾರು ಕಾರ್ಯಕ್ರಮಗಳು ಅಮೇರಿಕಾ, ಯುರೋಪ್ ಇನ್ನಿತರ ದೇಶ ವಿದೇಶಗಳಲ್ಲಿ ಆಯೋಜನೆ ಮಾಡಲು ಸಾಧ್ಯವಾಗಿದೆ ಎಂದರೆ ದುರ್ಗಾ ಮಾತೆಯ ಅನುಗ್ರಹ ಮತ್ತು ಗುರುಗಳ ಆಶೀರ್ವಾದ ಹಾಗೂ ದಾನಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದರು. ಬಳಿಕ ಮಾತನಾಡಿದ ಅವರು ಡಾ! ಹೇಮಂತ್ ರೈ ಮನವಳಿಕೆಗುತ್ತು ರವರು ಸಾಧನೆಯನ್ನು ತಿಳಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಚೆನೈ ಘಟಕವನ್ನು ಮಾಡುವುದರಲ್ಲೊ ಡಾ!. ಹೇಮಂತ್ ರೈ ಮನವಳಿಕೆಗುತ್ತು ರವರ ಪಾತ್ರ ಇದೆ. ಕಡಬ ತಾಲ್ಲೂಕು ಪಟ್ಲ ಫೌಂಡೇಶನ್ ಘಟಕಕ್ಕೆ ಕೇಂದ್ರೀಯ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಕೆಲಸ ಕಾರ್ಯದಲ್ಲಿ ನಾವು ಕೂಡ ಇದ್ದೇವೆ ಎಂದು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಬಳಿಕ ಕಡಬ ತಾಲ್ಲೂಕು ಪಟ್ಲ ಪೌಂಡೇಶನ್ ಎಲ್ಲಾ ಪದಾಧಿಕಾರಿಗಳಿಗೆ ಸ್ಮರಣಿಗೆ ನೀಡಿ ಗೌರವಿಸಿದರು.

ಆನೆಕಲ್ಲು ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಅಧ್ಯಕ್ಷರು ನ್ಯಾಯವಾದಿಗಳು ಶ್ಯಾಂ ಭಟ್.ಓ ರವರು ಮಾತನಾಡಿ ಮಹರ್ಷಿಗಳು ತಪಸ್ಸನ್ನು ಮಾಡಿ ದೇವರ ಚೈತನ್ಯ ವನ್ನು ಕಂಡವರು.
ಶರವೂರು ದುರ್ಗಾಪರಮೇಶ್ವರಿ ದೇವಿ ಚೈತನ್ಯವನ್ನು ಕಂಡವರು ಧೌಮ್ಯ ಮಹರ್ಷಿಗಳು. ವಿಜ್ಞಾನಿಗಳು ವಿವಿಧ ಗ್ರಹಗಳಲ್ಲಿ ನೀರು ಇದೆಯಾ ಎಂದು ಅಧ್ಯಾಯನ ಮಾಡುತ್ತಾರೆ. ಎಲ್ಲಿ ನೀರು ಇರುತ್ತದೆಯೊ ಅಲ್ಲಿ ಜೀವ ಇರಲು ಸಾಧ್ಯವಿರುತ್ತದೆ. ಭೂಮಿಯಲ್ಲಿ ಜೀವಶಕ್ತಿಯನ್ನು ತುಂಬುವವಳು ದೇವಿ. ದೇವಸ್ಥಾನ ಕಟ್ಟುವುದರಲ್ಲಿ ಸಾರ್ಥಕ ಬದುಕಿದೆ. ಯಕ್ಷಗಾನ, ಪೌರಾಣಿಕ ವಿಷಯಗಳನ್ನು ನಾವು ಹೆಚ್ಚು ತಿಳಿದುಕೊಳ್ಳಬೇಕೆಂದು ತಿಳಿಸಿದ ಪಟ್ಲ ಸತೀಶ್ ಶೆಟ್ಟಿ ಯವರ ಕಾರ್ಯವನ್ನು ಕೊಂಡಾಡಿ ಅದಷ್ಟು ಬೇಗ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ಸಮಗ್ರ ಜೀರ್ಣೋದ್ಧಾರ ಕೆಲಸ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಂಡು ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ತಿಳಿಸಿದರು.

ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಯವರು ಮಾತನಾಡಿ. ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ರಾಜ್ಯ ಧಾರ್ಮಿಕ ಪರಿಷತ್ ನಲ್ಲಿ ಎ ಗ್ರೇಡ್ ದೇವಸ್ಥಾನವಾಗಿ ಬಹಳ ದೊಡ್ಡಮಟ್ಟದಲ್ಲಿ ಕಾರಣಿಕವನ್ನು ಹೊಂದಿದ ದೇವಸ್ಥಾನವಾಗಿದೆ, ಕಳೆದ ಬ್ರಹ್ಮಕಲಶೋತ್ಸವದಲ್ಲೂ ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರನಾಗಿದ್ದೇನೆ. ಒಂದು ಊರಿನಲ್ಲಿ ದೇವಸ್ಥಾನ, ಶಿಕ್ಷಣ ಸಂಸ್ಥೆ, ಸಂಘ ಸಂಸ್ಥೆಗಳನ್ನು ಗಮನಿಸಿದಾಗ ಆ ಊರಿನ ಸ್ಥಿತಿಗತಿಯನ್ನು ಆಲೋಚನೆ ಮಾಡಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಆಲಂಕಾರಿನ ಈ ಭಾಗ ಶ್ರೀ ದೇವಿಯ ಅನುಗ್ರಹ ದಿಂದ ಬಹಳಷ್ಟು ಸಂಪದ್ಬರಿತ ಊರಾಗಿದೆ ಎಂದರು. ಶ್ರೀ ದೇವಿಯ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಕೋಟಿ ಹಣ ಕೊಟ್ಟರು ಅದು ಪ್ರಚಾರ ಬೇಡ ಎನ್ನುವುದು, ಅದು ಶ್ರೀ ದೇವಿಯ ಮಹಿಮೆ ಎಂದು ತಿಳಿಸಿದ ಅವರು ಶ್ರೀ ಶರವೂರು ದುರ್ಗಾಪರಮೇಶ್ವರಿ ದೇವಿಯ ಶರವೂರಿನಲ್ಲಿ ನೆಲೆ ನಿಂತು ಊರ ಪರವೂರ ಭಕ್ತರನ್ನು ಹರಸುವಂತದ್ದೇ ಶ್ರೀ ದೇವಿಯ ಮಹಿಮೆ ಎಂದ ಅವರು ಅದಷ್ಟು ಬೇಗ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ನೇರವೆರಲಿ ಎಂದು ತಿಳಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ರಿ.ಮಂಗಳೂರಿನ ಪ್ರದಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಯವರು ಪಟ್ಲ ಫೌಂಡೇಶನ್ ಸಮಾಜಮುಖಿ ಕೆಲಸ ಕಾರ್ಯಗಳ ಮಾಹಿತಿ ನೀಡಿ ಕಡಬ ತಾಲ್ಲೂಕು ಘಟಕಕ್ಕೆ ಶುಭಹಾರೈಸಿದರು.

ಇದೇ ಸಂಧರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಡಬ ತಾಲೂಕು ಘಟಕದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ, ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಪ್ರಧಾನ ಸಂಚಾಲಕರಾಗಿ ಡಾ| ಹೇಮಂತ್ ರೈ ಮನವಳಿಕೆಗುತ್ತು, ಪ್ರಧಾನ ಕಾರ್ಯದರ್ಶಿ ಎಸ್ ವಿ ಪ್ರಸಾದ್ ಕಣಿಪುರ, ಜತೆ ಕಾರ್ಯದರ್ಶಿ ಜನಾರ್ಧನ ಗೌಡ ಕಯ್ಯಪೆ, ಕೋಶಾಧಿಕಾರಿ ಮಮತಾ ಅಂಬರಾಜೆ
ಉಪಾಧ್ಯಕ್ಷರಾದ ವಿಠಲ್ ರೈ ಕೊಣಾಲುಗುತ್ತು , ಬೇಬಿ ಸಿ ಪಾಟಾಲಿ, ಗೌರವ ಸಲಹೆಗಾರರಾದ ಸುಬ್ರಹ್ಮಣ್ಯ ರಾವ್ ನಗ್ರಿ, ರಮೇಶ್ ಭಟ್ ಉಪ್ಪಂಗಳ, ಈಶ್ವರ ಗೌಡ ಪಜ್ಜಡ್ಕ, ರಾಧಾಕೃಷ್ಣ ರೈ ಪರಾರಿಗುತ್ತು, ಕೆ ಗೋಪಾಲ ಕಡಬ, ಮುತ್ತಪ್ಪ ಪೂಜಾರಿ ನೆಯ್ಯಲ್ಗ ರವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಶಾಲನ್ನು ಪಟ್ಲ ಫೌಂಡೇಶನ್ ಸ್ಥಾಪಧ್ಯಕ್ಷರಾದ ಸತೀಶ್ ಶೆಟ್ಟಿ ಪಟ್ಲರವರು ಶಾಲು ಹಾಕಿ ಗೌರವಿಸಿದರು.ನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆಗುತ್ತುರವರಿಗೆ ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.

ದುರ್ಗಾಂಬಾ ಆಲಂಕಾರ ಸಮಿತಿ ವತಿಯಿಂದ ದೇವಳದ ಬ್ರಹ್ಮಕಲಶೋತ್ಸವದ ಸಲುವಾಗಿ ಅದೃಷ್ಟ ಚೀಟಿಯನ್ನು ಒಡಿಯೂರು ಶ್ರೀ ಗಳು 10,000 ರೂಪಾಯಿಗಳ ಸಹಾಯಧನದೊಂದಿಗೆ ಅದೃಷ್ಟ ಚೀಟಿಯನ್ನು ಬಿಡುಗಡೆಗೊಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ವಹಿಸಿದ್ದರು.
ಕಡಬ ತಾಲ್ಲೂಕು ಪಟ್ಲ ಫೌಂಡೇಶನ್ ಕಡಬ ತಾಲ್ಲೂಕು ಘಟಕದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ರವರು ಸಂದರ್ಭೋಚಿತವಾಗಿ ಮಾತನಾಡಿ ಕಡಬ ಪಟ್ಲ ಫೌಂಡೇಶನ್ ವತಿಯಿಂದ ಒಳ್ಳೆಯ ಸಮಾಜಮುಖಿ ಕೆಲಸ ಕಾರ್ಯವನ್ನು ಮಾಡಲು ಎಲ್ಲಾರು ಸಹಕರಿಸುವಂತೆ ವಿನಂತಿಸಿದರು. ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ ರವರು ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಕುರಿತು ಮಾತನಾಡಿ ಸ್ವಾಗತಿಸಿದರು. ದೇವಲಯದ ವತಿಯಿಂದ, ಒಡಿಯೂರು ವಿಕಾಸ ವಾಹಿನಿ ಸ್ವ ಸಹಾಯ ಸಂಘದ ಆಲಂಕಾರು, ಕುಂಡಾಜೆ ಘಟಕದ ವತಿಯಿಂದ ಸ್ವಾಮೀಜಿಗಳನ್ನು ಸ್ವಾಗತಿಸಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಧಾಕೃಷ್ಣ ರೈ ಪರಾರಿಗುತ್ತು, ವಾಸಪ್ಪ ಗೌಡ ಕೆದ್ದೊಟ್ಟೆ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ವಿಠಲ ರೈ ಕೊಣಾಲುಗುತ್ತು, ಗುರುಪ್ರಸಾದ್ ಆಲೆಕ್ಕಿ ಅತಿಥಿಗಳನ್ನು ಸ್ವಾಗತಿಸಿ, ನಾರಾಯಣ ಭಟ್,ಬಿ, ಸದಾನಂದ ಮಡ್ಯೋಟ್ಟು ಪರಿಚಯ ಪತ್ರವಾಚಿಸಿ, ಗಣರಾಜ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆಗುತ್ತು ರವರು ದೇವಸ್ಥಾನದ ಸಮಗ್ರ ಅಭಿವೃದ್ಧಿ ಮತ್ತು ಗಣ್ಯರ ಹಾಗೂ ಮುಖ್ಯಮಂತ್ರಿಗಳ ಭೇಟಿಯ ಕುರಿತು ತಿಳಿಸಿ ಧನ್ಯವಾದ ಸಮರ್ಪಿಸಿದರು.
ಸೆ.21ರಿಂದ ಅ.2ರ ತನಕ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಸೆ.29ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ,ಶ್ರೀಮತಿ ಅಮೃತ ಅಡಿಗ ಭಾಗವತಿಕೆಯಲ್ಲಿ ಯಕ್ಷಗಾನ ಗಾನ ವೈಭವ, ಧಾರ್ಮಿಕ ಸಭಾಕಾರ್ಯಕ್ರಮ, ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸೆ.30ರಂದು ಬೆಳಿಗ್ಗೆ ಚಂಡಿಕಾಹೋಮ
ಮದ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಕಾಂಚನ ಈಶ್ವರ ಭಟ್ಟರ ಶಿಷ್ಯೆಯರಿಂದ ಶಾಸ್ತ್ರೀಯ ಸಂಗೀತ ಕಛೇರಿ, ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ,ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು
ಅ.1ರಂದು ಮಹಾನವಮಿ
ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ
ಸಂಜೆ ಶ್ರೀ ಮಾತೃಶ್ರೀ ಭಜನಾ ಮಂಡಳಿ ಕೊಂಡಾಡಿಕೊಪ್ಪ ಇವರಿಂದ ಭಜನೆ ರಾತ್ರಿ ರಂಗಪೂಜೆ,ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ,ಮಹಾಮಂತ್ರಾಕ್ಷತೆ,ಅನ್ನಸಂತರ್ಪಣೆ ನಡೆಯಿತು
ಅ.2 ವಿಜಯದಶಮಿ ಯಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ,ಅಕ್ಷರಾಭ್ಯಾಸ,ಶ್ರೀ ದುರ್ಗಾಂಬಾ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಇವರಿಂದ ಯಕ್ಷಗಾನ ತಾಳಮದ್ದಳೆ ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ನವಾನ್ನ ಸಂತರ್ಪಣೆ ನಡೆಯಿತು.
ಆ.3ರಂದು ಸ್ವಚ್ಚತಾ ಕಾರ್ಯಕ್ರಮ, ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಮಂಗಳೂರಿನ ಸಂಸದರಾದ ಬ್ರಿಜೇಶ್ ಚೌಟ, ಸುಳ್ಯ ವಿಧಾನಸ ಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ರಾಜ್ಯ ಧಾರ್ಮಿಕ ಸದಸ್ಯೆ ಮಲ್ಲಿಕಾ ಪಕಳ, ಮನೋಹರ ಎಲ್ ಬೆಂಗಳೂರು, ವಿಷ್ಣು ದಯಾ ಕಂಪೆನಿಯ ಮುಖ್ಯಸ್ಥರಾದ ವಿಷ್ಣುಮೂರ್ತಿ, ದಯಾನಂದ ಸಿ.ಎ ಬೆಂಗಳೂರು, ಕುಮಾರಸ್ವಾಮಿ ಬೆಂಗಳೂರು, ಪುಣಚ ಮಹಿಷಮರ್ದಿನಿ ದೇವಸ್ಥಾನದ ಅಧ್ಯಕ್ಷರಾದ ಮಾರಪ್ಪ ಶೆಟ್ಟಿ ಬೈಲುಗುತ್ತು, ಕಡಬ ಉಪತಹಶೀಲ್ದಾರರಾದ ಗೋಪಾಲ.ಕೆ ಸೇರಿದಂತೆ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಖಂಡರು ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಊರಭಕ್ತಾದಿಗಳ ಪರವೂರ ಸಾವಿರಾರು ಭಕ್ತಾದಿಗಳು ಶ್ರೀ ದೇವಿಯ ನವರಾತ್ರಿ ಉತ್ಸವದಲ್ಲಿ, ಭಕ್ತಾದಿಗಳು ರಂಗಪೂಜೆ, ಚಂಡಿಕಾ ಹೋಮ ಇನ್ನಿತರ ಸೇವೆಯಲ್ಲಿ ಪಾಲ್ಗೊಂಡರು. 25,000ಕ್ಕೂ ಅಧಿಕ ಮಂದಿ ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಪ್ರವಿತ್ರಪಾಣಿ ಹರೀಶ ಆಚಾರ್ಯ ನಗ್ರಿಗುತ್ತು, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆಗುತ್ತು,
ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ, ಪೂವಪ್ಪ ನಾಯ್ಕ್ ಎಸ್,ದಾಮೋದರ ಗೌಡ ಕಕ್ವೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿಪ್ರಸಾದ ಉಪಾಧ್ಯಾಯ, ರಾಧಾಕೃಷ್ಣ ರೈ ಪರಾರಿಗುತ್ತು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ವಿಠಲ ರೈ, ವಾಸಪ್ಪ ಗೌಡ, ಮೋಹನ ಶರವೂರು, ಪುಷ್ಪಲತಾ ಕೆ, ರೋಹಿಣಿ ಬಿ.ಎನ್ ಗೌರವ ಸದಸ್ಯರಾದ ದಾಮೋದರ ಗೌಡ,ಜೀರ್ಣೋದ್ಧಾರ ಸಮಿತಿಯ ಸದಸ್ಯರು, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರು, ಶರವೂರು, ಶ್ರೀ ದುರ್ಗಾಂಬಾ ಕಲಾ ಸಂಗಮದ ಅಧ್ಯಕ್ಷರಾದ ಚಂದ್ರದೇವಾಡಿಗ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಅಧ್ಯಕ್ಷರಾದ ನೋಣಯ್ಯ ಕೆದಿಲ,ಆಲಂಕಾರ ಸಮಿತಿಯ ಅಧ್ಯಕ್ಷರಾದ ಗಣರಾಜ್ ಆಲಂಕಾರು, ಸ್ವಯಂ ಸೇವಾ ಸಮಿತಿಯ ಅಧ್ಯಕ್ಷರಾದ ಚೆನ್ನಪ್ಪ ಗೌಡ ಶರವೂರು, ಉತ್ಸವ ಸಮಿತಿ ಅಧ್ಯಕ್ಷರಾದ ಲಕ್ಷೀ೬ ನಾರಾಯಣ ಪ್ರಭು,ಬೆಂಗಳೂರು ಸಮಿತಿಯ ಅಧ್ಯಕ್ಷರಾದ ಅಜಿತ್ ಕುಮಾರ್ ಕುಂತೂರುಗುತ್ತು, ದೇವಸ್ಥಾನದ ಆರ್ಚಕರು,ಸಿಬ್ಬಂದಿ ವರ್ಗ, ಸೀಮೆಯ ಹತ್ತು ಸಮಸ್ತರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.