ನಾಳೆಯಿಂದ ಪುತ್ತೂರಿನ ಅರುಣ ಕಲಾಮಂದಿರದಲ್ಲಿ ಭೀಮ ಜ್ಯುವೆಲ್ಲರಿ ವತಿಯಿಂದ ಗ್ರ್ಯಾಂಡ್ ಎಕ್ಸ್ ಪೋ ಸೇಲ್

0

ಸ್ಪೆಷಲ್ ಡಿಸ್ಕೌಂಟ್ ಜೊತೆಗೆ ಗ್ರಾಹಕರಿಗೆ ಲಭಿಸಲಿದೆ ಹಲವಾರು ಕೊಡುಗೆಗಳು

ಪುತ್ತೂರು: ಕಾಸರಗೋಡಿನ ಹಳೇ ಪ್ರೆಸ್ ಕ್ಲಬ್ ಜಂಕ್ಷನ್ ನಲ್ಲಿ ಶಾಖೆಯನ್ನು ಹೊಂದಿರುವ ಭೀಮ ಜ್ಯುವೆಲ್ಲರಿಯ ವತಿಯಿಂದ ಅ.4ರಿಂದ ಅ.6ರ ವರೆಗೆ ಪುತ್ತೂರಿನ ಅರುಣ ಕಲಾ ಮಂದಿರದಲ್ಲಿ ಗ್ರ್ಯಾಂಡ್ ಎಕ್ಸ್ ಪೋ ಸೇಲ್ ನಡೆಯಲಿದ್ದು, ಇದರ ಉದ್ಘಾಟನಾ ಸಮಾರಂಭವು ಅ.4ರಂದು ಬೆಳಗ್ಗೆ ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.


ಎಕ್ಸ್ ಪೋ ಸೇಲ್ ವೇಳೆ ಚಿನ್ನಾಭರಣ ಖರೀದಿಸಿದರೆ ಚಿನ್ನದ ಆಭರಣಗಳ ತಯಾರಿಕಾ ಶುಲ್ಕದ ಮೇಲೆ 50% ವರೆಗೆ ರಿಯಾಯಿತಿ ದೊರೆಯಲಿದೆ. ಪ್ರತಿ ಕ್ಯಾರೆಟ್ ವಜ್ರದ ಮೇಲೆ ರೂ.15,೦೦೦ವರೆಗೆ ರಿಯಾಯಿತಿ ದೊರೆಯಲಿದೆ. ಚಿನ್ನದ ಆಭರಣಗಳ ತಯಾರಿಕಾ ಶುಲ್ಕ 1% ನಿಂದ ಆರಂಭಗೊಳ್ಳಲಿದೆ. ಹಳೆ ಚಿನ್ನಾಭರಣ ಮಾರಾಟ ಮಾಡುವಾಗ 125ರೂ ಅಧಿಕ ಪಡೆಯ ಬಹುದಾಗಿದೆ. ಆಯ್ದ ಬೆಳ್ಳಿ ಮತ್ತು ಪ್ಲಾಟಿನಂ ಆಭರಣಗಳ ತಯಾರಿಕಾ ಶುಲ್ಕ 0% ಆಗಿರುತ್ತದೆ. ವಿಶೇಷ ಮುಂಗಡ ಬುಕ್ಕಿಂಗ್ ಸೌಲಭ್ಯವೂ ಸ್ಥಳದಲ್ಲಿ ಲಭ್ಯವಿದೆ.

ಪ್ರತಿ ಖರೀದಿಯ ಮೇಲೂ ಗ್ರಾಹಕರಿಗೆ ಖಚಿತ ಉಡುಗೊರೆ ಲಭಿಸಲಿದೆ. ಎಕ್ಸ್ ಪೋ ಸಂದರ್ಭದಲ್ಲಿ ಬರುವ ಗ್ರಾಹಕರಿಗೆ ವಿಸಿಟ್ ವಿನ್ ಕೂಪನ್ ಲಭ್ಯವಿದ್ದು, ಲಕ್ಕಿ ಡ್ರಾ ಮೂಲಕ ಬಹುಮಾನಗಳನ್ನು ಗೆಲ್ಲುವ ಸೌಲಭ್ಯವನ್ನು ಸಂಸ್ಥೆ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಮೊಬೈಲ್ ಸಂಖ್ಯೆ 9495509777ಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here