ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯತ್ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 2024-25ನೇ ಸಾಲಿನ ಕೇಂದ್ರ 15ನೇ ಹಣಕಾಸು ಯೋಜನೆ ಹಾಗೂ ರಾಜ್ಯ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಅ.4ರಂದು ಬೆಳಿಗ್ಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಗೌಡ ಅವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿ ನಿರ್ವಹಿಸಲು ಅವಕಾಶವಿದೆ. ಗ್ರಾಮಸ್ಥರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಉದ್ಯೋಗ ಖಾತ್ರಿ ಯೋಜನೆಯ ಕಡಬ ತಾಲೂಕು ಐಇಸಿ ಭರತ್ ಅವರು ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಫಲಾನುಭವಿಗಳು ಯಾವುದೇ ಆಸ್ತಿ ಸೃಜನೆ ಮಾಡಿದಲ್ಲಿ ಕನಿಷ್ಠ 5 ವರ್ಷ ಬಳಕೆಯಾಗಬೇಕು. ಒಬ್ಬ ಫಲಾನುಭವಿಗೆ ಮೂರು ಕಾಮಗಾರಿ ನಿರ್ವಹಿಸಲು ಅವಕಾಶವಿದೆ. ಗ್ರಾಮಸ್ಥರು ಇದರ ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು.

ಮೆಸ್ಕಾಂ ಕಡಬ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸಜಿಕುಮಾರ್ ನೋಡೆಲ್ ಅಧಿಕಾರಿಯಾಗಿದ್ದರು. ಕಡಬ ತಾಲೂಕು ಹಿರಿಯ ಗ್ರಾಮ ಸಂಪನ್ಮೂಲ ವ್ಯಕ್ತಿ ಸವಿತಾ ಅವರು ಯೋಜನೆಯ ಕುರಿತು ಮಾಹಿತಿ ನೀಡಿದರು.
ಇಂಜಿನಿಯರ್ಗಳಾದ ಎಸ್.ಎಸ್.ಹುಕ್ಕೇರಿ, ಸವಿತಾ ಲೋಬೋ, ಮನೋಜ್ಕುಮಾರ್, ಗ್ರಾ.ಪಂ.ಸದಸ್ಯರಾದ ಮಹೇಶ್ ಪಟ್ಲಡ್ಕ, ಸುಧಾಕರ ಜಿ., ಲೋಕೇಶ್ ಬಾಣಜಾಲು, ವಿಶ್ವನಾಥ ಕೊರಮೇರು, ಕೆ.ಎಂ.ಹನೀಫ್, ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಸ್ಥರಾದ ಬಾಲಕೃಷ್ಣ ಬಾಣಜಾಲು, ಎಂ.ಕೆ.ಇಬ್ರಾಹಿಂ, ವರ್ಗೀಸ್ ಅಬ್ರಹಾಂ, ಶ್ರೀನಿವಾಸಪೂಜಾರಿ, ಬಿಜುಕುಮಾರ್ ಮತ್ತಿತರರು ಸಲಹೆ ಸೂಚನೆ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಜಯಮಣಿ ಪಿ., ಪ್ರಣಮ್ಯ ಪಿ., ರಮ್ಯ ಎಸ್., ಪ್ರತಿಭಾಕುಮಾರ್ ಹೆಚ್., ಪೂಜಾ ಹಾಗೂ ಗ್ರಾ.ಪಂ.ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ನರೇಗಾದಲ್ಲಿ 37.13 ಲಕ್ಷ ರೂ.ಖರ್ಚು;
2024-25ನೇ ಸಾಲಿನಲ್ಲಿ ಕೌಕ್ರಾಡಿ ಗ್ರಾ.ಪಂ.ನಲ್ಲಿ 138 ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳು ನಡೆದಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಜಯಮಣಿ ಪಿ., ಪ್ರಣಮ್ಯ ಪಿ., ರಮ್ಯ ಎಸ್., ಪ್ರತಿಭಾಕುಮಾರ್ ಹೆಚ್., ಪೂಜಾ ಹಾಗೂ ಗ್ರಾ.ಪಂ.ಸಿಬ್ಬAದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ನರೇಗಾದಲ್ಲಿ 37.13 ಲಕ್ಷ ರೂ.ಖರ್ಚು;
2024-25ನೇ ಸಾಲಿನಲ್ಲಿ ಕೌಕ್ರಾಡಿ ಗ್ರಾ.ಪಂ.ನಲ್ಲಿ 138 ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳು ನಡೆದಿದ್ದು 8367 ಮಾನವ ದಿನ ಸೃಜನೆಯಾಗಿದೆ. 240 ಕುಟುಂಬಗಳ 443 ಫಲಾನುಭವಿಗಳು ಕೂಲಿ ಪಡೆದುಕೊಂಡಿದ್ದಾರೆ. 29,90,192 ರೂ.ಕೂಲಿ ಹಾಗೂ 8,04,079 ಸಾಮಾಗ್ರಿ ಮೊತ್ತ ಸೇರಿ ಒಟ್ಟು 37,13,271 ರೂ.ಖರ್ಚು ಆಗಿದೆ. ಸಾಮಾಜಿಕ ಪರಿಶೋಧನೆ ಹಿನ್ನೆಲೆಯಲ್ಲಿ 58 ಮನೆಗಳಿಗೆ ಭೇಟಿ ನೀಡಲಾಗಿದ್ದು 28 ಮನೆಗಳಲ್ಲಿ ನಾಮಫಲಕ ಅಳವಡಿಸಲು ಬಾಕಿ ಇದೆ ಎಂದು ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಸಭೆಗೆ ಮಾಹಿತಿ ನೀಡಿದರು.
ಹಣಕಾಸು ಯೋಜನೆ ವೆಚ್ಚ;
ಕೇಂದ್ರದ 15ನೇ ಹಣಕಾಸು ಯೋಜನೆಯಡಿ 2024-25ನೇ ಸಾಲಿನಲ್ಲಿ 40 ಕಾಮಗಾರಿಗಳು ನಡೆದಿದ್ದು 45.42 ಲಕ್ಷ ರೂ.ಖರ್ಚು ಆಗಿದೆ. 2020-21ರಿಂದ 2024-25ನೇ ತನಕದ 5 ವರ್ಷದ ಅವಧಿಯಲ್ಲಿ ತಾ.ಪಂ.ನ 54,40,431 ರೂ.ಅನುದಾನದಲ್ಲಿ 40 ಕಾಮಗಾರಿ ಹಾಗೂ ಜಿ.ಪಂ.ನ 9,37,235 ರೂ.ಅನುದಾನದಲ್ಲಿ 11 ಕಾಮಗಾರಿ ನಿರ್ವಹಣೆ ಮಾಡಲಾಗಿದೆ ಎಂದು ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.