ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ (ರಿ.) ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮೂವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಸಂಸ್ಥೆಯವರು ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆಗೈದಿದ್ದಾರೆ.
ಪುತ್ತೂರು ನೈತಾಡಿಯ ಕೃಷ್ಣರಾಜ್ ಎಚ್.ಎಸ್. ಮತ್ತು ವಿದ್ಯಾ ಕೃಷ್ಣರಾಜ್ ದಂಪತಿ ಪುತ್ರ ಪ್ರಜ್ವಲ್ ಎಚ್, ಪುತ್ತೂರು ಹಾರಾಡಿಯ ಅಶೋಕ್ ಭಟ್ ಕೆ. ಮತ್ತು ನಯನ ಎ. ಭಟ್ ದಂಪತಿ ಪುತ್ರ ಅಭಿನವ ವಸಿ? ಹಾಗೂ ಪುತ್ತೂರು ನೆಹರುನಗರದ ಕೇಶವ ಮತ್ತು ವನಿತಾ ದಂಪತಿ ಪುತ್ರ ಜಸ್ವಿತ್ ಎನ್‌ಡಿಎ ಪರೀಕ್ಷೆಯನ್ನು ತೇರ್ಗಡೆ ಹೊಂದಿ ಸಾಧನೆ ಮೆರೆದಿದ್ದಾರೆ.
