ಪುತ್ತೂರು:ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಪೂರಕ ಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಸಾಮಾಜಿಕ ಜಾಗೃತಿ ಯೋಜನೆಯಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಸಾರ್ವಜನಿಕರಿಗೆ ಬಟ್ಟೆ ಕೈ ಚೀಲಗಳನ್ನು ವಿತರಿಸಲಾಗುತ್ತಿದೆ.
ಯೋಜನೆಯ ಭಾಗವಾಗಿ ಸಹಕಾರಿ ರಜತ ಮಹೋತ್ಸವದ ವರ್ಷಾಚರಣೆಯ ಸಂದರ್ಭದಲ್ಲಿ ಸುಮಾರು 2000 ಬಟ್ಟೆ ಚೀಲಗಳನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ದಿನಾಂಕ ಸೆ.30 ರಂದು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ ಕಾರ್ಯಕ್ರಮದಲ್ಲಿ ಬಟ್ಟೆ ಚೀಲ ಬಿಡುಗಡೆ ಮಾಡುವ ಮೂಲಕ ಕ್ಲಬ್ ನ ಎಲ್ಲ ಸದಸ್ಯರಿಗೆ ಉಚಿತ ವಾಗಿ ವಿತರಿಸಲಾಯಿತು.
ಸಹಕಾರಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಸಂತ ನಾಯಕ್ ಎ ಇವರು ಸಹಕಾರಿ ಸೇವಾ ಸೌಲಭ್ಯಗಳ ಕುರಿತು ಹಾಗೂ ಟ್ರಸ್ಟ್‌ನ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಚಂದ್ರಹಾಸ್ ರೈ ಬಿ, ಕಾರ್ಯದರ್ಶಿ ಜಯಪ್ರಕಾಶ್ ಎ ಎಲ್, ಅಶ್ರಫ್ ಮುಕ್ವೆ, ಸಹಕಾರಿಯ ನಿರ್ದೇಶಕ ವಸಂತ ಶಂಕರ್, ಸಹಕಾರಿಯ ಸಿಇಒ ವಸಂತ ನಾಯಕ್ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.