ಪುತ್ತೂರು: ನೋಕಿಪಡಿ ಕ್ರಿಕೆಟರ್ಸ್ ನೆಲ್ಯಾಡಿ ಮತ್ತು ಅಬುಧಾಬಿ ಹಾಗೂ ಸಚಿನ್ ಕ್ರಿಕೆಟರ್ಸ್ ನೆಲ್ಯಾಡಿ ಇದರ ಜಂಟಿ ಆಶ್ರಯದಲ್ಲಿ ನೆಲ್ಯಾಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳ 40 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಆಟಗಾರರಿಗೆ ಲೆಜೆಂಡ್ ಟ್ರೋಫಿ ಸೀಸನ್-2 ಡಿಸೆಂಬರ್ನಲ್ಲಿ ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಲೆಜೆಂಡ್ ಟ್ರೋಫಿ ಸಲಹಾ ಸಮಿತಿ ರಚಿಸಲಾಗಿದೆ.
ಗೌರವಧ್ಯಕ್ಷರಾಗಿ ಶಿವಣ್ಣ ಪಿ ಹೆಗ್ಡೆ, ಅಧ್ಯಕ್ಷರಾಗಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಉಪಾಧ್ಯಕ್ಷರಾಗಿ ಜಿ.ಪಂ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಉದ್ಯಮಿ ಶಾಜಿ ವರ್ಗಿಸ್, ಮುರಳಿ ನಾಯರ್, ಮೊಹಮ್ಮದ್ ಹನೀಫ್ ಸಿಟಿ ಇಬ್ರಾಹಿಂ ಎಂ ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ್ ನೆಲ್ಯಾಡಿ ಬೆಂಗಳೂರು, ಕಾರ್ಯದರ್ಶಿಗಳಾಗಿ ಪ್ರಮೋದ್ ಕುಮಾರ್, ಸಲಾಂ ಪಡುಬೆಟ್ಟು, ಆನಂದ ಪಿಲಾವೂರ್, ಬದ್ರುದ್ದಿನ್ ಕೋಲ್ಪೆ, ಕ್ರೀಡಾ ಕಾರ್ಯದರ್ಶಿಯಾಗಿ ಸತೀಶ್ ಮಕ್ಕಿಗದ್ದೆ, ಸಂಘಟನಾ ಕಾರ್ಯದರ್ಶಿಯಾಗಿ ರಫೀಕ್ ಪ್ರಿಯದರ್ಶಿನಿ ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿ ಸದಸ್ಯರುಗಳಾಗಿ ದಯಾಕರ್ ರೈ, ಎಂ ಐ ತೋಮಸ್, ವಿಮಲ್ ಕುಮಾರ್, ಜೋಲ್ಜಿ ಚಾಕೊ, ಹಕ್ ನೆಲ್ಯಾಡಿ ಸೌದಿ ಅರೇಬಿಯಾ, ರಮೇಶ್ ಕೋರಮೇರು, ರಫೀಕ್ ಬೈಲ್, ಇಲ್ಯಾಸ್ ಮೊರಂಕಾಲ, ದಿನೇಶ್ ಎಂ ಟಿ,ನವಾಜ್ ಸುಜಯ್ ದುಬೈ ಆಯ್ಕೆಯಾದರು.