ಲಯನ್ಸ್ ಇಂಟರ್ನ್ಯಾಷನಲ್ ಮತ್ತು ಲಯನ್ಸ್ ಕ್ಲಬ್ ಪುತ್ತೂರು ವತಿಯಿಂದ ಚಾರ್ಟರ್ ನೈಟ್

0

ಪುತ್ತೂರು: ಲಯನ್ಸ್ ಇಂಟರ್ನ್ಯಾಷನಲ್ ಮತ್ತು ಲಯನ್ಸ್ ಕ್ಲಬ್ ಪುತ್ತೂರು ವತಿಯಿಂದ ಅ.8 ರಂದು ಚಾರ್ಟರ್ ನೈಟ್ ಮತ್ತು ಜೋನ್ ಸೋಶಿಯಲ್ ಕಾರ್ಯಕ್ರಮ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಚಾರ್ಟರ್ ನೈಟ್ ಕಾರ್ಯಕ್ರಮವನ್ನು ಚಾರ್ಟರ್ ಮೆಂಬರ್ ಲಯನ್ ಸುಬ್ರಹ್ಮಣ್ಯ ಕೊಳತ್ತಾಯರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಸೆಕೆಂಡ್ ಡಿಸ್ಟಿಕ್ ಗವರ್ನರ್ ಎಂ.ಜೆ.ಎಫ್ ಲಯನ್ ಗೋವರ್ಧನ ಶೆಟ್ಟಿ ನಡೆಸಿಕೊಟ್ಟು, ಕ್ಲಬ್ ನ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಜೋನ್ ಸೋಶಿಯಲ್ ಕಾರ್ಯಕ್ರಮವನ್ನು ಜೋನ್ ಚೇರ್ ಪರ್ಸನ್ ಎಂ.ಜೆ.ಎಫ್ ಲಯನ್ ಜೆಸಿಂತಾ ಮಸ್ಕರೇಂಜಸ್ ನಡೆಸಿಕೊಟ್ಟು, ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಜ್ಞಾ ವಿಶೇಷ ಚೇತನ ಆಶ್ರಮಕ್ಕೆ ಅಕ್ಕಿ ಹಾಗೂ ಕೃಷ್ಣನಗರ ಅಂಗನವಾಡಿಗೆ ಆಟಿಕೆ ಸಾಮಾನುಗಳನ್ನು ನೀಡಲಾಯಿತು. ಲಯನ್ ನಯನ ರೈ ಪ್ರಜ್ಞಾ ವಿಶೇಷ ಚೇತನ ಮಕ್ಕಳಿಗೆ ಸಮ ವಸ್ತ್ರವನ್ನು ವಿತರಿಸಿದರು. ಲಯನ್ ಅಧ್ಯಕ್ಷೆ ಪ್ರೇಮಲತಾ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಅರವಿಂದ ಭಗವಾನ್ ವರದಿ ವಾಚಿಸಿದರು.

ವೇದಿಕೆಯಲ್ಲಿ ರಿಜನ್ಎಂಬಾಸಿಡರ್ ಲಯನ್ ಎಂ.ಜೆ.ಎಫ್ ಸದಾನಂದ ಶೆಟ್ಟಿ, PRO ಲಯನ್ ಸುದರ್ಶನ ಪಡಿಯಾರು ,ಜೋನ್ ಎಡ್ವೈಸರ್ ಲಯನ್ ಸದಾಶಿವ ನಾಯ್ಕ್ ಉಪಸ್ಥಿತರಿದ್ದರು ಮತ್ತು ಕೋಶಾಧಿಕಾರಿ ಲಯನ್ ಸುಧಾಕರ್ ಧನ್ಯವಾದಗೈದರು

LEAVE A REPLY

Please enter your comment!
Please enter your name here