ಬಡಗನ್ನೂರು: ಪಡುಮಲೆ ಬದಿನಾರು ಶ್ರೀ ಪೂಮಾಣಿ-ಕಿನ್ನಿಮಾಣಿ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಶ್ರೀ ವ್ಯಾಘ್ರ ಚಾಮುಂಡಿ ದೈವದ “ಪುದ್ವಾರ್ ಮೆಚ್ಚಿ”(ನವಾನ್ನ ಪ್ರಸಾದ) ನೇಮೋತ್ಸವವು ಅ.17 ರಂದು ಶ್ರೀ ಸನ್ನಿಧಿಯಲ್ಲಿ ನಡೆಯಿತು.

ಅ.17ರಂದು ಬೆಳಗ್ಗೆ ಗಣಪತಿ ಹೋಮ, ನವಕಾಭಿಷೇಕ ನಡೆದು ಉಳ್ಳಾಕುಲು, ವ್ಯಾಘ್ರ ಚಾಮುಂಡಿ ಹಾಗೂ,ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ 12 ರಿಂದ ವ್ಯಾಘ್ರಚಾಮುಂಡಿ ದೈವದ ಪುದ್ವಾರ್ ಮೆಚ್ಚಿ (ನವಾನ್ನ ಪ್ರಸಾದ) ನೇಮೋತ್ಸವ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಪೂಮಾಣಿ-ಕಿನ್ನಿಮಾಣಿ ವ್ಯಾಘ್ರ ಚಾಮುಂಡಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಮಾಜಿ ಅಧ್ಯಕ್ಷ ಸಂಜೀವ ರೖೆ ಕೆ. ಪಿ, ಶ್ರೀ ಪೂಮಾಣಿ-ಕಿನ್ನಿಮಾಣಿ ವ್ಯಾಘ್ರ ಚಾಮುಂಡಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಶಶಿಧರ ರೖೆ ಕುತ್ಯಾಳ, ದಯಾ ವಿ ರೖೆ ಬೆಳ್ಳಿಪ್ಪಾಡಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ಶ್ರೀಧರ ನಾಯ್ಕ ನೇರ್ಲಪ್ಪಾಡಿ, ಪ್ರೇಮಾ ಕುದ್ಕಾಡಿ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಜನಾರ್ದನ ಪೂಜಾರಿ ಪದಡ್ಕ, ಉದಯ ಕುಮಾರ್ ಪಡುಮಲೆ, ಶಂಕರಿ ಪಟ್ಟೆ, ಗೋಪಾಲ ನಾಯ್ಕ ದೊಡ್ಡಡ್ಕ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ಲು, ಸ್ಥಳೀಯರಾದ ಕೃಷ್ಣ ರೖೆ ಕುದ್ದಾಡಿ, ಆನಿಲ್ ಕುಮಾರ್ ಕನ್ನಡ್ಕ, ರತ್ನಾಕರ ಶೆಟ್ಟಿ ಕುದ್ಕಾಡಿ, ಸತೀಶ್ ಕುುಲಾಲ್ ಕಜಮೂಲೆ ಮಹಾಲಿಂಗ ಪಾಟಾಳಿ ಕುದ್ಕಾಡಿ, , ಬಾಲ್ತು ಡಿ ಸೋಜಾ, ವೆಂಕಪ್ಪ ನಾಯ್ಕ ಹಾಗೂ ಗ್ರಾಮಸ್ಥರು ಭಾಗವಹಿಸಿದರು.