ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟ : ನವೋದಯ ಪ್ರೌಢಶಾಲೆಗೆ ಹಲವು ಪ್ರಶಸ್ತಿ

0

ಪುತ್ತೂರು:ಅ.24ರಂದು ಸರ್ವೋದಯ ಪ್ರೌಢಶಾಲೆ ಸುಳ್ಯಪದವು ಇಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ, ನವೋದಯ ಪ್ರೌಢಶಾಲೆ ಬೆಟ್ಟಂಪಾಡಿಯ ವಿದ್ಯಾರ್ಥಿಗಳು ಭಾಗವಹಿಸಿ, 7 ಬಹುಮಾನಗಳನ್ನು ಪಡೆದು, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿರುತ್ತಾರೆ.

14ರ ವಯೋಮಾನದ ಚಕ್ರ ಎಸೆತ ಸ್ಪರ್ಧೆಯಲ್ಲಿ ಧನುಷ್ ದ್ವಿತೀಯ ಸ್ಥಾನ,ದೀಶಾ 400ಮೀ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ , ಮಿಥುನ್ 600ಮೀ ಓಟ ದ್ವಿತೀಯ ಸ್ಥಾನ ಪಡೆದಿರುತ್ತಾರೆ.17ರ ವಯೋಮಾನದ ಸ್ಪರ್ಧೆಯಲ್ಲಿ 3000ಮೀ ಓಟದಲ್ಲಿ ರಾಕೇಶ್ ದ್ವಿತೀಯಸ್ಥಾನ,ರವಿತೇಜ 1500ಮೀ ಮತ್ತು 800ಮೀ ನಲ್ಲಿ ತೃತೀಯ ಸ್ಥಾನ,100ಮೀ ಓಟದಲ್ಲಿ ತರುಣ್ ದ್ವಿತೀಯ ಸ್ಥಾನ, 4*400ಮೀ ರಿಲೇ ಸ್ಪರ್ಧೆಯಲ್ಲಿ ವಿಭಾಶ್ರೀ,ತನುಶ್ರೀ,ಲತೀಕ್ಷಾ,ಪಾತಿಮತ್ ಶಾನಿಬಾ ಭಾಗವಹಿಸಿ, ತೃತೀಯ ಸ್ಥಾನ ಪಡೆದಿರುತ್ತಾರೆ .ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ.ಪಿ ತರಬೇತಿಯನ್ನು ನೀಡಿರುತ್ತಾರೆ.ತಂಡ ಶಿಕ್ಷಕಿ ಭುವನೇಶ್ವರಿ.ಎಂ ಹಾಗೂ ಶಿಕ್ಷಕ ರಾಧಾಕೃಷ್ಣ ಕೊಡಿ ಶಾಲಾ ಕ್ರೀಡಾಪಟುಗಳಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here