




ಪುತ್ತೂರು: ಕೆಮ್ಮಾಯಿ ಭರತಪುರದಲ್ಲಿರುವ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ವತಿಯಿಂದ ಊರ ಪರವೂರ ಸಹೃದಯ ದಾನಿಗಳ ಸಹಕಾರದಿಂದ ಕಿಡ್ನಿ ಡಯಾಲಿಸಿಸ್ ರೋಗಿಗಳಿಗೆ ನೀಡಲಾಗುವ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯ 41ನೇ ಯೋಜನೆಯ ಕಾರ್ಯಕ್ರಮ ಅ.26ರಂದು ಭರತಪುರದ ಸೇವಾಶ್ರಮದಲ್ಲಿ ನಡೆಯಲಿದೆ.



ಹಸಿದವರ ಪಾಲಿನ ಅನ್ನದಾತರಾಗಿ ತಮಗೆ ಅನುಕೂಲವಾಗುವಂತೆ ಆರ್ಥಿಕವಾಗಿ ಸಹಕರಿಸಬಹುದು. ಕನಿಷ್ಟ 10 ಕೆ.ಜಿ. ಅಕ್ಕಿ ನೀಡುವವರು ವಸ್ತು ರೂಪದಲ್ಲಿ ಅಥವಾ ನಗದು ರೂಪದಲ್ಲಿ ಸಹಾಯ ಮಾಡಬಹುದು ಎಂದು ಸೇವಾಶ್ರಮದ ಚೇತನ್‌ರವರು ತಿಳಿಸಿದ್ದಾರೆ.












