





ಪ್ರಥಮ ಕಾರ್ಯಾಗಾರ ನವೆಂಬರ್ 18ರಂದು ಪುತ್ತೂರಿನಲ್ಲಿ ಚಾಲನೆ
ದ್ವಿತೀಯ ಕಾರ್ಯಾಗಾರ – ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್ ಮಂಗಳೂರು
ಕ್ಯಾಂಪಸ್‌ನಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ 2 ದಿನಗಳ ಕಾಲ ನಡೆಯಲಿರುವುದು.
ತೃತೀಯ ಕಾರ್ಯಾಗಾರ – ಆಯ್ದ ಉದ್ಯಮಿಗಳಿಗೆ ಅಟಲ್ ಇನ್ಕ್ಯುಬೇಷನ್ ಸೆಂಟರ್ ನಿಟ್ಟೆ /
ಮಂಗಳೂರು ಇವರ ಆಶ್ರಯದಲ್ಲಿ ಇನ್ಕ್ಯುಬೇಷನ್ (ಸಂಪೂರ್ಣ ಬೆಂಬಲ) ನೀಡಲಾಗುವುದು.







‘ಸುದ್ದಿ ಅರಿವು’ ಸಂಸ್ಥೆ ಪುತ್ತೂರು, ಸುದ್ದಿ ಮಾಧ್ಯಮ, ಸುದ್ದಿ ಮಾಹಿತಿ ಟ್ರಸ್ಟ್, ಅಟಲ್ ಇನ್ಕ್ಯುಬೇಶನ್ ಸೆಂಟರ್ ನಿಟ್ಟೆ ಮತ್ತು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ನವೋದ್ಯಮಗಳಿಗಾಗಿ ಮಾಹಿತಿ ಶಿಬಿರದ ಪೂರ್ವಭಾವಿ ಮಾಹಿತಿ ಕಾರ್ಯಾಗಾರವನ್ನುಪುತ್ತೂರಿನಲ್ಲಿ ನವಂಬರ್ 18, ಮಂಗಳವಾರದಂದು ಹಮ್ಮಿಕೊಳ್ಳಲಾಗಿದೆ.
ಈ ಪೂರ್ವಭಾವಿ ಕಾರ್ಯಕ್ರಮದ ಉದ್ದೇಶ ಮುಂದಿನ ನವೋದ್ಯಮ ಕಾರ್ಯಾಗಾರದ ಕುರಿತು ಸಮಗ್ರ ಮಾಹಿತಿ ನೀಡುವುದು, ಅದರ ಉದ್ದೇಶ, ವಿಷಯ ಮತ್ತು ಭಾಗವಹಿಸುವ ವಿಧಾನಗಳನ್ನು ವಿವರಿಸುವುದು.
ಈ ಕಾರ್ಯಾಗಾರವು ನವೋದ್ಯಮ (ಸ್ಟಾರ್ಟ್‌ಅಪ್) ಪ್ರಾರಂಭಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳು ಹಾಗೂ ಈಗಾಗಲೇ ವ್ಯವಹಾರ ನಿರ್ವಹಿಸುತ್ತಿರುವವರು ಮತ್ತು ಎಂ.ಎಸ್.ಎಂ.ಇ ಉದ್ಯಮಿಗಳಿಗೆ ಕೃಷಿ, ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ, ಸೇವೆ, ಕೈಗಾರಿಕೆ ಆಧಾರಿತ ಉದ್ಯಮಗಳಿಗೆ ಸಮಗ್ರ ಮಾಹಿತಿಯನ್ನು ಸಿಎಎಸ್‌ಎಸ್ ನಾಯಕ್ (ಎಂ.ಎಸ್.ಎಂ.ಇ ಸ್ಟಾರ್ಟ್ ಅಪ್ ಮೆಂಟರ್ – ಬಿಸಿನೆಸ್ ಕೋಚ್), ಡಾ ಎ ಪಿ ಆಚಾರ್, ಸಿಇಓ ಅಟಲ್ ಇನ್ಕ್ಯುಬೇಷನ್ ಸೆಂಟರ್ ನಿಟ್ಟೆ ಹಾಗೂ ಡಾ. ಜ್ಞಾನೇಶ್ವರ ಪೈ ಮಾರೂರು, ಪ್ರಾಂಶುಪಾಲರು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್ ಮುಂತಾದ ಸಂಪನ್ಮೂಲ ವ್ಯಕ್ತಿಗಳು ನೀಡಲಿದ್ದಾರೆ.
ಸಿಎ ಎಸ್.ಎಸ್. ನಾಯಕ್ ಕಳೆದ ಮೂರು ದಶಕಗಳಿಂದ ಸಾವಿರಾರು ಉದ್ಯಮಿಗಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅವರ ನಿರ್ದೇಶನದಲ್ಲಿ ಭಾರತದಾದ್ಯಂತ 14 ಎಂ.ಎಸ್.ಎಂ.ಇ ಕಾನ್ ಕ್ಲೆವನ್ನು ಯಶಸ್ವಿಯಾಗಿ ನಡೆಸಿ ಜನ ಮನ್ನಣೆ ಗಳಿಸಿರುತ್ತಾರೆ .
ಡಾ ಎ ಪಿ ಆಚಾರ್‌ರವರು ಕೇಂದ್ರ ಸರಕಾರದ ನೀತಿ ಆಯೋಗದಿಂದ ಪ್ರಾಯೋಜಿತ ನಿಟ್ಟೆಯ ಅಟಲ್ ಇನ್ಕ್ಯುಬೇಷನ್ ಸೆಂಟರ್‌ನ ಸಿಇಓ ಆಗಿ ಕಳೆದ 5 ವರ್ಷಗಳಿಂದ 150ಕ್ಕೂ ಹೆಚ್ಚು ಉದ್ಯಮಿಗಳಿಗೆ ನವೋದ್ಯಮ ಪ್ರಾರಂಭಿಸಲು ಮಾಹಿತಿ, ಮಾರ್ಗದರ್ಶನ, ತರಬೇತಿ ಹಾಗೂ ಹಣಕಾಸಿನ ನೆರವು ನೀಡಿರುತ್ತಾರೆ. ಅನೇಕ ನವೋದ್ಯಮಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಪ್ರೋತ್ಸಾಹ ನೀಡಿರುತ್ತಾರೆ.
ಡಾ. ಜ್ಞಾನೇಶ್ವರ ಪೈ ಮಾರೂರು ಅವರು ಅನುಭವಸಂಪನ್ನ ಅಕಾಡೆಮಿಷಿಯನ್ ಮತ್ತು ಆಡಳಿತ ತಜ್ಞರು. ಅವರು ವ್ಯವಹಾರ ನಿರ್ವಹಣೆಯಲ್ಲಿ ಎಂ.ಬಿ.ಎ., ಎಂ.ಫಿಲ್., ಪಿ.ಎಚ್.ಡಿ. ಪದವಿಗಳನ್ನು ಪಡೆದಿದ್ದು, 21 ವರ್ಷಗಳ ಬ್ಯಾಂಕಿಂಗ್, ಅಕಾಡೆಮಿಕ್ ಮತ್ತು ಸಂಶೋಧನಾ ಅನುಭವ ಹೊಂದಿದ್ದಾರೆ. ಜೆ.ಪಿ. ಮಾರ್ಗನ್ ಚೇಸ್ ಬ್ಯಾಂಕ್‌ನಲ್ಲಿ ಭಾರತ ಮತ್ತು ಅಮೇರಿಕಾ ಕಚೇರಿಗಳಲ್ಲಿ ಹಾಗೂ ಜಸ್ಟಿಸ್ ಕೆ.ಎಸ್. ಹೆಗ್ಡೆ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್ ಮತ್ತು ನಿಟ್ಟೆ ಎಂ.ಎ.ಎಂ ತಾಂತ್ರಿಕ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್‌ನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಶೈಕ್ಷಣಿಕ ಶ್ರೇಷ್ಠತೆ, ಕೈಗಾರಿಕಾ ಸಹಭಾಗಿತ್ವ ಮತ್ತು ನವೀನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದಾರೆ.
ಈ ಕಾರ್ಯಕ್ರಮ 3 ಸ್ಥರಗಳಲ್ಲಿ ಏರ್ಪಡಲಿದೆ.
* ಪ್ರಥಮವಾಗಿ ಪುತ್ತೂರಿನಲ್ಲಿ ಅರಿವು ಕೇಂದ್ರದ ಮುಖಾಂತರ * ದ್ವಿತೀಯವಾಗಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್ ಮಂಗಳೂರು ಕ್ಯಾಂಪಸ್‌ನಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ 2 ದಿನಗಳ ಕಾರ್ಯಾಗಾರ ನಡೆಯಲಿರುವುದು. * ತದ ನಂತರ ಆಯ್ದ ಉದ್ಯಮಿಗಳಿಗೆ ಅಟಲ್ ಇನ್ಕ್ಯುಬೇಷನ್ ಸೆಂಟರ್ ನಿಟ್ಟೆ / ಮಂಗಳೂರು ಇವರ ಆಶ್ರಯದಲ್ಲಿ ಇನ್ಕ್ಯುಬೇಷನ್ (ಸಂಪೂರ್ಣ ಬೆಂಬಲ) ನೀಡಲಾಗುವುದು.
ಈ ರೀತಿಯ ಯೋಚನೆ, ಯೋಜನೆ ಹಾಗೂ ಕಾರ್ಯ ವಿಧಾನ ಕರಾವಳಿ ಕರ್ನಾಟಕದಲ್ಲಿಯೇ ಪ್ರಥಮ ಎಂಬ ಹೆಮ್ಮೆ ನಮಗಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಸೀಮಿತ ಸೀಟುಗಳ ಅವಕಾಶವಿರುವುದರಿಂದ ನೋಂದಾವಣಿಗಾಗಿ ಸುದ್ದಿ ಮಾಹಿತಿ ಟ್ರಸ್ಟ್ ಮೊ: 9986416537, ಸುದ್ದಿ ಅರಿವು ಕೇಂದ್ರ ಮೊ: 8050293990ನ್ನು ಸಂಪರ್ಕಿಸಬಹುದು.






