





ಕಾಣಿಯೂರು: ಇಲಾಖಾ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ ನಡೆದ ಸವಣೂರು ವಲಯಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪ್ರಗತಿ ವಿದ್ಯಾಸಂಸ್ಥೆಯು ಹಲವು ಬಹುಮಾನಗಳನ್ನು ಪಡೆದುಕೊಂಡಿದೆ.


ಪ್ರಾಥಮಿಕ ಬಾಲಕರ ವಿಭಾಗ:-
ಎ ಕೆ ಅಭಿನವ ಶರ್ಮ (7ನೇ) 600 ಮೀ ಪ್ರಥಮ, 400 ಮೀ ಪ್ರಥಮ ಸ್ಥಾನಗಳನ್ನು ಗಳಿಸುವ ಮೂಲಕ ವೈಯಕ್ತಿಕ ಚಾಂಪಿಯನ್ ಶಿಫ್ ಪಡೆದುಕೊಂಡಿರುತ್ತಾರೆ. ಶೋಭಿತ್ (8ನೇ) ಚಕ್ರ ಎಸೆತ ಪ್ರಥಮ, ಗುಂಡೆಸತ ದ್ವಿತೀಯ, ಆರ್ಯ ಕೇನಾಜೆ (8ನೇ) 100 ಮೀ ತೃತೀಯ, 200 ಮೀ ತೃತೀಯ, 4100 ರಿಲೇ ದ್ವಿತೀಯ, ಅಕ್ಷಿತ್ (7ನೇ) 4100 ರಿಲೇ ದ್ವಿತೀಯ, ಮಹಮ್ಮದ್ ಫಾರೀಝ್ (8ನೇ) 4100 ರಿಲೇ ದ್ವಿತೀಯ, ಮಹಮ್ಮದ್ ಅನಾಸ್ (7ನೇ)4100 ರಿಲೇ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.





ಪ್ರಾಥಮಿಕ ಬಾಲಕಿಯರ ವಿಭಾಗ:-
ಭವಿಷ್ಯ ರೈ (9ನೇ) 600 ಮೀ ಪ್ರಥಮ, 400 ಮೀ ತೃತೀಯ, 4100 ರಿಲೇ ಪ್ರಥಮ, ತೃಷಾ ಎನ್ ಓ (8ನೇ) 200 ಮೀ ಪ್ರಥಮ, 4100 ರಿಲೇ ಪ್ರಥಮ, ಮಂಗಳ ಎಂ (8ನೇ) ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ದ್ವಿತೀಯ, ಕಂಗನಾ ರೈ (7ನೇ) 4100 ರಿಲೇ ಪ್ರಥಮ, ತನ್ವಿ (8ನೇ) 4100 ರಿಲೇ ಪ್ರಥಮ ಸ್ಥಾನಗಳನ್ನು ಪಡೆಯುವ ಮೂಲಕ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಪ್ರೌಢ ಬಾಲಕರ ವಿಭಾಗ:-
ಸಮರ್ಥ್ ಪೈಕ (10ನೇ) ಜಾವಲಿನ್ ತ್ರೋ ಪ್ರಥಮ, ಉದ್ದ ಜಿಗಿತ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, 4100 ರಿಲೇ ದ್ವಿತೀಯ ಸ್ಥಾನಗಳನ್ನು ಗಳಿಸುವ ಮೂಲಕ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿರುತ್ತಾರೆ. ನಿಶಾಂತ್ ಕೆ ಜಿ (9ನೇ)100 ಮೀ ಪ್ರಥಮ, 200 ಮೀ ದ್ವಿತೀಯ, 4100 ರಿಲೇ ದ್ವಿತೀಯ, ದಕ್ಷ ಎಂ ಡಿ (10ನೇ)4100 ರಿಲೇ ದ್ವಿತೀಯ, ವಿಕಾಸ್ (9ನೇ) ಗುಂಡು ಎಸೆತ ಪ್ರಥಮ, 4100 ರಿಲೇ ದ್ವಿತೀಯ, ಮಧ್ವರಾಜ್ ಎಚ್ ವಿ (9ನೇ) 4400 ರಿಲೇ ತೃತೀಯ, ಕುಮಾರ ಸುಬ್ರಹ್ಮಣ್ಯ (9ನೇ) 4400 ರಿಲೇ ತೃತೀಯ, ಚಿಂತನ್ ಡಿ ಗೌಡ (9ನೇ) 4400 ರಿಲೇ ತೃತೀಯ, ಶ್ರೇಯಸ್ ಕೆ (10ನೇ) 4400 ರಿಲೇ ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.

ಪ್ರೌಢಶಾಲಾ ಬಾಲಕಿಯರ ವಿಭಾಗ:
ಅನನ್ಯ ರೈ (10ನೇ) 200 ಮೀ ದ್ವಿತೀಯ, 4100 ರಿಲೇ ತೃತೀಯ, ಜಾನ್ವಿ ಎಂ (8ನೇ) 4100 ರಿಲೇ ತೃತೀಯ, ಜಾಹ್ನವಿ (10ನೇ) 4100 ರಿಲೇ ತೃತೀಯ, ಕುಶ್ಯ ಡಿ ಗೌಡ (8ನೇ) 4100 ರಿಲೇ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಕನ್ನಡ ಮಾಧ್ಯಮದ ಸಾಧಕ ವಿದ್ಯಾರ್ಥಿಗಳಾದ ಪ್ರೇಕ್ಷಕ್ (10ನೇ) 3000 ಮೀ ಪ್ರಥಮ, 1500 ಮೀ ಪ್ರಥಮ, 800 ಮೀ ದ್ವಿತೀಯ, ಗಗನ ಡಿ (9ನೇ) ಉದ್ದ ಜಿಗಿತ ದ್ವಿತೀಯ, ತೃಪ್ತಿ ಎಚ್ ಎಸ್ (9ನೇ) 400 ಮೀ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ಕುಮಾರ್ ತರಬೇತಿಯನ್ನು ನೀಡಿರುತ್ತಾರೆ.
ಶಿಕ್ಷಕಿಯರಾದ ಜಯಶೀಲ ಕೆ ಮತ್ತು ರಚನ ಸಹಕರಿಸಿರುತ್ತಾರೆ.










