





ಪುತ್ತೂರು: ದೇವಳದ ಅರ್ಚಕರೊಬ್ಬರಿಗೆ ಬೀದಿ ನಾಯಿ ಕಡಿತಗೊಂಡ ಘಟನೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಾಗ ಸನ್ನಿಧಿಯ ಬಳಿ ನ.4ರಂದು ಬೆಳಗ್ಗೆ ನಡೆದಿದೆ.


ಅರ್ಚಕರು ಬೆಳಗ್ಗೆ ನಾಗ ಸನ್ನಿಧಿಯ ಪೂಜಾ ಕಾರ್ಯಕ್ಕೆಂದು ಬರುವ ವೇಳೆ ಬೀದಿ ನಾಯಿಯೊಂದು ಅವರ ಎಡ ಕಾಲಿಗೆ ಕಚ್ಚಿದೆ. ಗಾಯಗೊಂಡ ಅವರು ಆಸ್ಪತ್ರೆಯಿಂದ ಚುಚ್ಚುಮದ್ದು ಪಡೆದುಕೊಂಡಿದ್ದಾರೆ. ಈಗಾಗಲೇ ಒಂದು ಚುಚ್ಚುಮದ್ದನ್ನು ನಿನ್ನೆ ಅಡ್ಯನಡ್ಕ ಮನೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಡೆದುಕೊಂಡಿದ್ದೇನೆ. ಒಟ್ಟು ನಾಲ್ಕು ಚುಚ್ಚು ಮದ್ದು ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ. ಇನ್ನು ಮೂರು ಚುಚ್ಚುಮದ್ದು ಪಡೆದುಕೊಳ್ಳಲು ಬಾಕಿ ಇದೆ. ಸದ್ಯ ಪೂಜಾ ಕಾರ್ಯಗಳಿಗೆ ತೊಂದರೆ ಆಗಿಲ್ಲ ಎಂದು ಗಾಯಾಳು ಅರ್ಚಕ ನವೀನ್ಕೃಷ್ಣ ಅವರು ತಿಳಿಸಿದ್ದಾರೆ.












