ಪಣೆಮಜಲು: ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ, ಸನ್ಮಾನ ಕಾರ್ಯಕ್ರಮ

0

ಪುತ್ತೂರು: ವಿ ಆರ್ ಫ್ರೆಂಡ್ಸ್ ಪಣೆಮಜಲು ವತಿಯಿಂದ ಆಹ್ವಾನಿತ 10 ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಪಣೆಮಜಲು ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು ಸವಣೂರು ಗ್ರಾ.ಪಂ ಸದಸ್ಯ ಅಬ್ದುಲ್ ರಝಾಕ್ ಕೆನರಾ ಉದ್ಘಾಟಿಸಿದರು.


ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ ಸದಸ್ಯ ಎಂ.ಎ.ರಫೀಕ್ ವಹಿಸಿದ್ದರು. ವೇದಿಕೆಯಲ್ಲಿ ಇಕ್ಬಾಲ್ ಕೆನರಾ, ಮೋನಪ್ಪ ಗೌಡ ಇಡ್ಯಾಡಿ, ಶಮೀರ್ ಮುಲಾರ್, ರತನ್ ಅಗರಿ, ನಾಸಿರ್ ಪಿ.ಎಂ, ಇಬ್ರಾಹಿಂ ಪಣೆಮಜಲು, ಸುಲೈಮಾನ್ ಪಳ್ಳತಮೂಲೆ, ಸ್ವಾಲಿಹ್ ಬೇರಿಕೆ, ಸಮೀರ್ ಪಲ್ಲತಮೂಲೆ, ನಾಸಿರ್ ಎನ್.ಆರ್, ನಝೀರ್ ಸಿ.ಎ ಉಪಸ್ಥಿತರಿದ್ದರು.


ಹಾಶೀರ್ ಪಳ್ಳತಮೂಲೆ ಸ್ವಾಗತಿಸಿದರು. ನಾಸಿರ್ ಪಿ.ಎಂ ವಂದಿಸಿದರು. ಹತ್ತು ತಂಡಗಳ ನಡುವೆ ನಡೆದ ಲೀಗ್ ಮಾದರಿಯ ಪಂದ್ಯಾಟದಲ್ಲಿ ಫ್ರೆಂಡ್ಸ್ ಪಂಜಳ ಪ್ರಥಮ, ರೋಮಿಂಗ್ ಬಾಯ್ಸ್ ದ್ವಿತೀಯ ಮತ್ತು ಸಿ.ಎಚ್.ಕನ್ ಸ್ಟ್ರಕ್ಷನ್ ತಂಡ ತೃತೀಯ ಸ್ಥಾನ ಪಡೆಯಿತು. ಅನಿಲ್ ಗುತ್ತಿಗಾರು ಮತ್ತು ಮೋಹಿತ್ ಏನೆಕಲ್ ತೀರ್ಪುಗಾರರಾಗಿ ಮತ್ತು ಸುಹೈಲ್ ಸಮಾದಿ ಸ್ಕೋರರ್ ಆಗಿ ಸಹಕರಿಸಿದರು. ಗಣೇಶ್ ನಡುವೇಲು ವೀಕ್ಷಕ ವಿವರಣೆ ನೀಡಿದರು.


ಸಂಜೆ ನಡೆದ ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿ.ಪಂ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ವಹಿಸಿದ್ದರು. ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷ ಮೂಸಾ ಹಾಜಿ ಬೇರಿಕೆ, ನಾಟಿ ವೈದ್ಯ ವಾಸುದೇವ ಇಡ್ಯಾಡಿ ಹಾಗೂ ಉದ್ಯಮಿ ಇಸ್ಮಾಯಿಲ್ ಟಾಸ್ಕೋ ಅವರನ್ನು ಸನ್ಮಾನಿಸಲಾಯಿತು.

ಅಶ್ವಿನಿ ಫಾರ್ಮ್ಸ್‌ನ ಮಾಲಕ ರಾಜಾರಾಮ ಪ್ರಭು ಮತ್ತು ಪ್ರಗತಿಪರ ಕೃಷಿಕ ಕುಶಾಲಪ್ಪ ಗೌಡ ಇಡ್ಯಾಡಿ, ಎ.ಆರ್.ಚಂದ್ರ ಎಡಪತ್ಯರವರು ಬಹುಮಾನ ವಿತರಣೆ ನಡೆಸಿದರು. ಅತಿಥಿಗಳಾಗಿ ರಾಜೇಂದ್ರ ಪ್ರಸಾದ್ ಇಡ್ಯಾಡಿ, ಸಂಶುದ್ದೀನ್ ಆರ್ತಿಕೆರೆ, ಆನಂದ ಇಡ್ಯಾಡಿ, ಮನೋಹರ ಇಡ್ಯಾಡಿ, ಅಶ್ರಫ್ ಬಿ.ಸಿ, ಹಂಝ ಸಿರಾಜ್, ರಫೀಕ್ ಪಳ್ಳತಮೂಲೆ, ರಫೀಕ್ ಟಾಸ್ಕೋ, ಉಮ್ಮರಬ್ಬ ಮುಲಾರ್, ಉಮ್ಮರ್ ಕುಕ್ಕುಜೆ, ಇರ್ಷಾದ್ ಸರ್ವೆ, ಅಬ್ದುಲ್ ರಹಿಮಾನ್ ಸರ್ವೆ, ಚರಣ್ ಇಡ್ಯಾಡಿ, ಅಬ್ದುಲ್ ಕುಂಞಿ ಸಮಾದಿ, ನಝೀರ್ ಮುಂಡತಡ್ಕ, ಇರ್ಷಾದ್ ಕೆ.ಪಿ, ಭಾಗವಹಿಸಿದ್ದರು. ಹೈದರ್ ಆಲಿ ಐವತ್ತೊಕ್ಲು ಸ್ವಾಗತಿಸಿದರು. ಸಮೀರ್ ಸಿರಾಜ್ ವಂದಿಸಿದರು. ಸಿದ್ದೀಕ್ ಪಳ್ಳತಮೂಲೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here