





ಪುತ್ತೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ಆರೋಗ್ಯಕರ ಜೀವನ ಶೈಲಿ ಹಾಗು ಅಗ್ನಿ ಸುರಕ್ಷತೆ ಬಗ್ಗೆ ಜಾಗೃತಿ ಕಾರ್ಯಕ್ರಮ ನ.6ರಂದು ಜರಗಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಡಾ.ರಾಜೇಶ್ ರೈ ಸವಣೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಇತ್ತೀಚಿನ ಜೀವನ ಶೈಲಿಯಿಂದ ಯುವಜನರಲ್ಲಿ ರೋಗಗಳು ಹೆಚ್ಚಾಗುತ್ತಿದ್ದು ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.



ಮುಖ್ಯ ಅತಿಥಿ ಪುತ್ತೂರು ಅಗ್ನಿಶಾಮಕ ಪ್ರಮುಖ ಲೀಲಾದರ್, ಅಗ್ನಿ ಅವಘಡಗಳು ಸಂಭವಿಸಿದಾಗ ಹೇಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ವಿದ್ಯಾರ್ಥಿಗಳಿಗೆ ತಮ್ಮ ಅಗ್ನಿಶಾಮಕ ದಳದ ತಂಡದೊಂದಿಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿಯನ್ನು ನೀಡಿದರು.





ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿ ಅಡ್ವಕೇಟ್.ಅಶ್ವಿನ್ ಎಲ್ ಶೆಟ್ಟಿ, ಆರೋಗ್ಯಕರ ಜೀವನ ಶೈಲಿಯ ಜೊತೆಗೆ ಸಮಯಕ್ಕೆ ಸರಿಯಾದ ಸುರಕ್ಷಾತಾ ಕ್ರಮಗಳನ್ನು ಬಳಸಿಕೊಂಡು ಅಪಾಯದಿಂದ ಪಾರಗುವ ಬುದ್ದಿವಂತಿಕೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ಅಗ್ನಿಶಾಮಕದಳದ ಠಾಣಾಧಿಕಾರಿ ಶಂಕರ್, ಅಶ್ವಿತಾ ರಾಜೇಶ್ ರೈ ಸ್ಟ್ರೋಕ್ ನ್ಯುಟ್ರಿಸನಿಸ್ಟ್, ರಶ್ಮಿ ಅಶ್ವಿನ್ ಶೆಟ್ಟಿ ಟ್ರಸ್ಟಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಕಾಲೇಜಿನ ಪ್ರಾಂಶುಪಾಲೆ ಡಾ.ರಾಜಲಕ್ಷ್ಮಿ ಎಸ್ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ, ಕಾಲೇಜಿನ ಉಪಪ್ರಾಂಶುಪಾಲ ಎಮ್ ಶೇಷಗಿರಿ, ಐ.ಕ್ಯೂ.ಐ.ಸಿ ಘಟಕಾಧಿಕಾರಿತ ಕೌಶಲ್ಯ ಎಸ್, ಯೂತ್ ರೆಡ್ ಕ್ರಾಸ್ನ ಘಟಕಾಧಿಕಾರಿ ನಿರೀಷ್ಮಾ.ಎನ್ ಸುವರ್ಣ ಹಾಗು ಯೂತ್ ರೆಡ್ ಕ್ರಾಸ್ನ ವಿದ್ಯಾರ್ಥಿ ನಾಯಕರಾದ ಮಹಮ್ಮದ್ ಅನೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ಬಿ.ಸಿ.ಎ ವಿಭಾಗದ ಮಹಮ್ಮದ್ ಸುಫ಼ೈದ್ ನಿರೂಪಿಸಿ, ಪ್ರಥಮ ಬಿ.ಕಾಂ ವಿಭಾಗದ ಸಫ಼ಾ ಫ಼ಾತಿಮಾ ಸ್ವಾಗತಿಸಿ, ಘಟಕದ ವಿದ್ಯಾರ್ಥಿ ನಾಯಕನಾದ ಮಹಮ್ಮದ್ ಅನೀಸ್ ದ್ವಿತೀಯ ಬಿ.ಸಿ.ಎ ಇವರು ವಂದಿಸಿದರು.










