





ಪುತ್ತೂರು: ತುಳುನಾಡಿನ ಕಾರಣಿಕ ದೈವಶಕ್ತಿಗಳಾದ ಶ್ರೀ ಮಲರಾಯ ದೈವಗಳು ನೆಲೆಸಿರುವ ಆರ್ಯಾಪು ಗ್ರಾಮದ ಸಂಟ್ಯಾರು ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಕೂರೇಲು ಶ್ರೀ ಮಲರಾಯ ದೈವಗಳ 19 ನೇ ವರ್ಷದ ನವದಶ ಸಂಭ್ರಮದ ನೇಮೋತ್ಸವವು ನ.11 ಮತ್ತು 12 ರಂದು ವಿಜೃಂಭಣೆಯಿಂದ ಜರಗಲಿದೆ.


ನ.11 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಗಣಹೋಮ, ನಾಗತಂಬಿಲ, ಹರಿಸೇವೆ, ಧರ್ಮದೈವಗಳ ತಂಬಿಲ,ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.೦೦ ಕ್ಕೆ ದೈವಗಳ ಭಂಡಾರ ಇಳಿಯುವ ಕಾರ್ಯಕ್ರಮ ನಡೆದು ರಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9.೦೦ ರಿಂದ ಕಳಲ್ತಾ ಗುಳಿಗ ನೇಮೋತ್ಸವ (ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪ್ರಾರ್ಥನೆ-ಬಡಿಸುವುದು). ಶ್ರೀ ಮಲರಾಯ ಮತ್ತು ಶ್ರೀ ಮಲರಾಯ ಬಂಟ ಮಹಿಶಾಂತಾಯ ದೈವಗಳ ನೇಮೋತ್ಸವ ನಡೆಯಲಿದ್ದು ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ.






ನ.12 ರಂದು ಸಂಜೆ 4.೦೦ ರಿಂದ ಶ್ರೀ ಕೊರಗಜ್ಜ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಸಂಜೆ 4.30 ರಿಂದ ಶ್ರೀ ಕೊರಗಜ್ಜ ದೈವದ ನೇಮ ನಡೆಯಲಿದೆ. ಸಂಜೆ 6.30 ರಿಂದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಕೊರತಿ ದೈವಗಳ ನೇಮೋತ್ಸವ ನಡೆದು ರಾತ್ರಿ 9.೦೦ ರಿಂದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಊರ ಪರವೂರ ಭಕ್ತಾಧಿಗಳು, ಕೂರೇಲು ತರವಾಡು ಕುಟುಂಬಸ್ಥರು, ಹಿತೈಷಿಗಳು, ಬಂಧು ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೇಮೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸುವಂತೆ ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವದಶ ನೇಮೋತ್ಸವ ಸಂಭ್ರಮ
ಕೂರೇಲು ಶ್ರೀ ಮಲರಾಯ ಪರಿವಾರ ದೈವಗಳಿಗೆ ತನ್ನದ ಆದ ಇತಿಹಾಸವಿದ್ದು ಕೂರೇಲು ಮಣ್ಣಿನಲ್ಲಿ ನೆಲೆನಿಂತು ಹತ್ತೂರ ಭಕ್ತರನ್ನು ಸಲಹುತ್ತಿರುವ ಈ ದೈವಶಕ್ತಿಗಳಿಗೆ ಬಹಳಷ್ಟು ಕಾರಣಿಕತೆ ಇದೆ. ಇಲ್ಲಿ ಬಂದು ಭಕ್ತಿಯಿಂದ ಕೈಮುಗಿದು ಬೇಡಿಕೊಂಡರೆ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವುದಕ್ಕೆ ಬಹಳಷ್ಟು ನಿದರ್ಶನಗಳು ಇಲ್ಲಿ ಸಿಗುತ್ತವೆ. ಶ್ರೀ ದೈವಸ್ಥಾನದಲ್ಲಿ ಈ ವರ್ಷ 19 ನೇ ವರ್ಷದ ನೇಮೋತ್ಸವ ‘ನವದಶ ಸಂಭ್ರಮ’ದ ನೇಮೋತ್ಸವ ಜರಗುತ್ತಿದೆ.










