





ಪುತ್ತೂರು:ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನವೆಂಬರ್ 8 ರಂದು ಕನಕ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ,ದೀಪ ಬೆಳಗಿ ಗೌರವ ನಮನವನ್ನು ಸಲ್ಲಿಸಿದರು.


ವಿದ್ಯಾರ್ಥಿನಿ ಅಭಿಜ್ಞಾ ಕನಕದಾಸರ ಬದುಕು ಮತ್ತು ಸಾಹಿತ್ಯ ಕೃತಿಗಳನ್ನು ಪರಿಚಯಿಸಿದರು. ಉಪಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್, ಸಂಯೋಜಕರಾದ ಪ್ರತಿಮಾ,ಗಾಯತ್ರಿ ಕೆ ಮತ್ತು ಅಮೃತವಾಣಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮ ವನ್ನು ಲಹರಿ ಸಾಹಿತ್ಯ ಸಂಘವು ಆಯೋಜಿಸಿತ್ತು















