





ಪುತ್ತೂರು: ರಾಜ್ಯ ಮಿನಿ ಓಲಿಂಪಿಕ್ಸ್ ನಲ್ಲಿ 14 ವರ್ಷ ಕೆಳಗಿನ ವಯೋಮಿತಿಯ ಹುಡುಗ ಮತ್ತು ಹುಡುಗಿಯರ ವಾಲಿಬಾಲ್ ಪಂದ್ಯಕೂಟ ನ.03 ರಿಂದ 7ರ ತನಕ ಬೆಂಗಳೂರು ಶ್ರೀಕಂಠೀರವ ಕ್ರೀಡಾಂಗಣದ ಹೊರಾಂಗಣದಲ್ಲಿ ನಡೆಯಿತು.


ಲೀಗ್ ಮಾದರಿಯ ಪಂದ್ಯದಲ್ಲಿ ಫೈನಲ್ ನಲ್ಲಿ ಬೆಂಗಳೂರಿನ ತಂಡವನ್ನು ನೇರ 3 ಸೆಟ್ ಗಳನ್ನು ಗೆಲ್ಲುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದು ಕೊಂಡಿತು.





ಕರ್ನಾಟಕ ಒಲಿಂಫಿಕ್ಸ್ ಅಧ್ಯಕ್ಶರಾದ ಡಾ.ಗೋವಿಂದ ರಾಜು, ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಇದರ ರಾಜ್ಯ ಉಪಾಧ್ಯಕ್ಷ ಜನಾಬ್ ಇಬ್ರಾಹಿಂ ಗೋಳಿಕಟ್ಟೆ, ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ, ಕಾರ್ಯಾಧ್ಯಕ್ಷರಾದ ಬಸವರಾಜ್ ಒಸಿ ಮಠ, ರಾಷ್ಟ್ರ ಹಿರಿಯ ಆಟಗಾರ ಜಗಿರ್ದರ್, ಏಕಲವ್ಯ ಪ್ರಶಸ್ತಿ ಶ್ವೇತಾ. ಮೀರಜ್ಕರ್. ರಾಷ್ಟ್ರ ತೀರ್ಪುಗಾರ ಬಾಲಾಜಿ ಪ್ರಭು ಸಮರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತಂಡದ ಕೋಚ್ ಮನೋಜ್ ನೆಲ್ಯಾಡಿ, ಮ್ಯಾನೇಜರ್ ಹಮೀದ್ ಸಾಜ, ತಂಡದ ಕಿರಿಯ ಆಟಗಾರ ಮೊಹಮ್ಮದ್ ಹೂದ್ ರನ್ನು ಉತ್ತಮ ಆಟಗಾರ ಎಂದು ಸನ್ಮಾನಿಸಲಾಯಿತು.








