ಪ್ರಗತಿ ಸ್ಟಡಿ ಸೆಂಟರ್ ಹಾಗೂ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್‌ಮೆಂಟ್ ಪ್ರಾಯೋಜಕತ್ವದಲ್ಲಿ ಕ್ರಿಕೆಟ್ ಪಂದ್ಯಾಟ

0

ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ಹಾಗೂ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್‌ಮೆಂಟ್ ಇದರ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಕ್ರಿಕೆಟ್ ಪಂದ್ಯಾಟವು ಕೋರ್ಟು ಮೈದಾನದಲ್ಲಿ ನ.9ರಂದು ನಡೆಯಿತು.


ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಸುಳ್ಯ ಮಾಂಡೋವಿ ಮೋಟಾರ್ಸ್ ನ ಸೀನಿಯರ್ ರಿಲೇಷನ್‌ಶಿಪ್ ಮ್ಯಾನೇಜರ್ ಹರ್ಷ ರೈ ಮತ್ತು ರಾಜ್ಯಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಇವರು ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿದರು.

ಒಟ್ಟು 4 ತಂಡಗಳು ಭಾಗವಹಿಸಿದ್ದು, ಮೊದಲ ಸ್ಥಾನವನ್ನು ಪ್ರಗತಿ ಸ್ಟಡಿ ಸೆಂಟರಿನ ಪ್ರಗತಿ ವಾರಿಯರ್‍ಸ್ ತಂಡ ಹಾಗೂ ದ್ವೀತಿಯ ಬಹುಮಾನವನ್ನು ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್‌ಮೆಂಟಿನ ಪ್ರಗತಿ ವಿಸ್ತಾರ ಎಮಿರಲ್ಡ್ ತಂಡವು ಪಡೆದುಕೊಂಡಿತು. ಪ್ರಗತಿ ವಾರಿಯರ್‍ಸ್ ತಂಡದ ಆಟಗಾರ ಮಹಮ್ಮದ್ ರಿಜ್ವಾನ್ ಉತ್ತಮ ಬ್ಯಾಟ್ಸ್‌ಮನ್ ಆಗಿ ಹಾಗೂ ಅದೇ ತಂಡದ ಇನ್ನೋರ್ವ ಆಟಗಾರ ಸುಬ್ಬಯ್ಯ ಉತ್ತಮ ಬೌಲರ್ ಆಗಿ ಆಯ್ಕೆಗೊಂಡರು.

ಉತ್ತಮ ಅಲ್‌ರೌಂಡರ್ ಆಗಿ ಪ್ರಗತಿ ವಿಸ್ತಾರ ಎಮಿರಲ್ಡ್ ತಂಡದ ಕಫ್ತಾನ ಮಹಮ್ಮದ್ ರಿಹಾಮ್ ಆಯ್ಕೆಗೊಂಡರು. ತೀರ್ಪುಗಾರರಾಗಿ ಪುರಂದರ ರೈ ಹಾಗೂ ವಿಜೇತ್ ಪಂದ್ಯಾಟದ ನಿಯಮಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಗೋಕಲ್‌ನಾಥ್ ಪಿ.ವಿ, ಪ್ರಾಂಶುಪಾಲೆ ಹೇಮಲತಾ ಗೋಕುಲ್ ನಾಥ್, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಯ್ಯರ್ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನೀಡಿದರು.

LEAVE A REPLY

Please enter your comment!
Please enter your name here