





ಪುತ್ತೂರು: ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಣಿಕ್ಕರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನಿತಿನ್ (10ನೇ ತರಗತಿ ) ಅತ್ಯುತ್ತಮ ಸಾಧನೆ ಮಾಡಿದ್ದು ಕ್ರೀಡಾಕೂಟದ 17 ರ ಬಾಲಕರ ವಿಭಾಗದ 800ಮೀ, 3000ಮೀ ಓಟದಲ್ಲಿ ಚಿನ್ನ ಹಾಗೂ 1500ಮೀ ಓಟದಲ್ಲಿ ಬೆಳ್ಳಿ ಪದಕ ಪಡೆದು ಓಟದ ಮೂರು ಸ್ಪರ್ಧೆಯಲ್ಲಿ ಪದಕ ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.


ವೈಯಕ್ತಿಕ ಚಾಂಪಿಯನ್ ಪಡೆದ ತಾಲೂಕಿನ ಸರಕಾರಿ ಪ್ರೌಢ ಶಾಲೆಯ ಏಕೈಕ ವಿದ್ಯಾರ್ಥಿ ಯಾಗಿರುವ ನಿತಿನ್ ಪಾಲ್ತಾಡಿ ಗ್ರಾಮದ ಕಾಪುತಮೂಲೆ ಧರ್ಮಪಾಲ ನಾಯ್ಕ ಹಾಗೂ ಶೀಲಾವತಿ ದಂಪತಿಯ ಪುತ್ರ.





ಮಣಿಕ್ಕರ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿಯವರ ತರಬೇತಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಶಾಲಾ ಮುಖ್ಯಗುರು ಗೀತಾ ಬಿ ವಿ, ಮತ್ತು ಶಿಕ್ಷಕ ವೃಂದ, ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷರಾದ ಸೆಯ್ಯದ್ ಗಫೂರ್ ಸಾಹೇಬ್ ಪಾಲ್ತಾಡು ಅಭಿನಂದಿಸಿದ್ದಾರೆ.










