






ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಾಘಾತ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕ ಗ್ರಾಮದ ಪೋಳ್ಯದಲ್ಲಿ ನ.11ರಂದು ಸಂಜೆ ನಡೆದಿದ್ದು, ಅಪಘಾತದ ತೀವ್ರತೆಗೆ ಆಕ್ಟಿವಾ ಸವಾರ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಆಕ್ಟಿವಾ ಸವಾರ ಸಾಮೆತ್ತಡ್ಕ ನಿವಾಸಿ ಅರುಣ್ ಮಸಾಲ ಸಂಸ್ಥೆಯ ಉದ್ಯೋಗಿ ಶಶಿಕುಮಾರ್ ಅವರು ತೀವ್ರ ಗಾಯಗೊಂಡವರು. ಅವರು ಚಲಾಯಿಸುತ್ತಿದ್ದ ಆಕ್ಟಿವಾ ಮತ್ತು ಕಾರು ನಡುವೆ ಪೋಳ್ಯದಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸವಾರ ಪಕ್ಕದ ಕೆರೆಗೆ ಬದಿಗೆ ಎಸೆಯಲ್ಪಟ್ಟಿದ್ದಾರೆಂದು ತಿಳಿದು ಬಂದಿದೆ. ಗಾಯಾಳು ಸವಾರ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.










