ದೈವ ನರ್ತಕ, ಕಲಾವಿದ ವಿಜಯನ್ ಪಾಂಡಿಯವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚಿಗೆ ನಿಧನರಾದ ದೈವ ನರ್ತನ ಕಲಾವಿದ ವಾಗ್ಮಿ, ಸಂಧಿ ಪಾಡ್ದನ ಸಂಶೋಧಕ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹಾಗೂ ಸಮಾಜ ಸೇವಕ ವಿಜಯನ್ ಪಾಂಡಿಯವರಿಗೆ ಕರ್ನಾಟಕ ರಾಜ್ಯ ನಲಿಕೆಯವರ ಮಾಜ ಸೇವಾ ಸಂಘ ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಪುತ್ತೂರು ಇದರ ಸಹಭಾಗಿತ್ವದಲ್ಲಿ ಶ್ರದ್ಧಾಂಜಲಿ ಸಭೆಯು ಜಿ.ಎಲ್. ರೋಟರಿ ಸಭಾಭವನದಲ್ಲಿ ನಡೆಯಿತು.

ಹಿರಿಯರಾದ ದೇವಪ್ಪ ಕೊಯಿನಾಡು ದೀಪ ಬೆಳಗಿಸಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನುಡಿನಮನ ಸಲ್ಲಿಸಿದರು. ತಾಲೂಕು ಸಂಘದ ಸ್ಥಾಪಕಾಧ್ಯಕ್ಷ ಚಂದ್ರ ಇದ್ಪಾಡಿ, ಮಾಜಿ ಅಧ್ಯಕ್ಷ ರವಿ ಎಂಡೆಸಾಗು, ಬಂಟ್ವಾಳ ತಾಲೂಕು ಸಂಘದ ಅಧ್ಯಕ್ಷ ರಾಮಣ್ಣ ಪಿಲಿಂಜ, ರಾಜ್ಯ ಸಂಘದ ಅಧ್ಯಕ್ಷ ದಯಾನಂದ ಸೇರ, ಮಾಜಿ ಅಧ್ಯಕ್ಷ ಸುಬ್ರಾಯ ಕಲ್ಮಂಜ ಮಹಿಳಾ ಸಂಘದ ಅಧ್ಯಕ್ಷೆ ಹಾಗೂ ಇತರರು ವಿಜಯ್‌ರವರ ಸೇವೆ, ತ್ಯಾಗ ಮತ್ತು ಬಹುಮುಖ ಪ್ರತಿಭೆಯನ್ನು ನೆನೆದು ನುಡಿ ನಮನ ಸಲ್ಲಿಸಿದರು.ವಿಜಯ್‌ರವರ ಹೆಸರಿನಲ್ಲಿ ಆಪತ್ಕಾಲ ಧನ ಸಂಗ್ರಹಿಸಿ ಸಮಾಜಕ್ಕೆ ವಿನಿಯೋಗಿಸುವುದು, ಅವರು ನಡೆಸುತ್ತಿದ್ದ ರಸಪ್ರಶ್ನೆ ಕಾರ್ಯಕ್ರಮವನ್ನು ಮುಂದುವರಿಸುವುದು, ಅವರ ಸದ್ಗತಿ ಕಾರ್ಯಕ್ಕೆ ಆರ್ಥಿಕ ಸಹಕಾರ ನೀಡಿ ಕುಟುಂಬಕ್ಕೆ ನೆರವಾಗುವುದು ಎಂಬಿತ್ಯಾದಿ ನಿರ್ಧಾರಗಳನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು.

LEAVE A REPLY

Please enter your comment!
Please enter your name here