





ಸ್ವಾತಂತ್ರ್ಯ ಸೇನಾನಿಗಳ ಜೀವನಾಡಿ ವಂದೇ ಮಾತರಂ- ಮನೋಜ್ ಕುಮಾರ್



ಪುತ್ತೂರು: ಬಂಕಿಮ್ ಚಂದ್ರ ಚಟರ್ಜಿಯವರಿಂದ ನೂರೈವತ್ತು ವರ್ಷಗಳ ಹಿಂದೆ ರಚಿಸಲ್ಪಟ್ಟ ವಂದೇ ಮಾತರಂ ಗೀತೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಉಸಿರಾಗಿತ್ತು. ಈ ಹಾಡನ್ನು ಹಾಡುತ್ತಾ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹಲವು ಧೀರರ ತ್ಯಾಗದ ಫಲವೇ ನಾವಿಂದು ಅನುಭಸುತ್ತಿರುವ ಸ್ವಾತಂತ್ರ್ಯ ಎಂದು ವಿವೇಕಾನಂದ ಶಿಕ್ಷಣ ಮಹಾ ವಿದ್ಯಾಲಯದ ಪ್ರಶಿಕ್ಷಣಾರ್ಥಿ ಮನೋಜ್ ಕುಮಾರ್ ಹೇಳಿದರು.





ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಯಾದವಶ್ರೀ ಸಭಾಂಗಣದಲ್ಲಿ ನ.10ರಂದು ನಡೆದ ವಂದೇ ಮಾತರಂ-150 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವಂದೇ ಮಾತರಂ ಭಾರತದ ರಾಷ್ಟ್ರೀಯ ಗೀತೆಯೆಂದೂ ಸಹ ಪ್ರಸಿದ್ದವಾಗಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಕಾರ್ಯ ನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಾತನಾಡಿ, ನಮ್ಮೆಲ್ಲರ ಹೃದಯದಲ್ಲಿ ವಂದೇ ಮಾತರಂ ಸದಾ ಗುಂಯ್ಗುಡುತ್ತಿರಬೇಕು ಎಂದರು. ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶಾನುಭೋಗ್ ಸಂದರ್ಭೋಚಿತ ನುಡಿಗಳನ್ನಾಡಿ, ಶುಭ ಹಾರೈಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಸ್ವಾಗತಿಸಿ, ವಂದಿಸಿದರು. ಸಹಶಿಕ್ಷಕಿ ಪವಿತ್ರಾ ರೈ ಕಾರ್ಯಕ್ರಮ ನಿರೂಪಿಸಿದರು.







