





ಪುತ್ತೂರು:ಪುತ್ತೂರಿನ ಎಪಿಎಂಸಿ ರಸ್ತೆ ಮತ್ತು ಮುಖ್ಯರಸ್ತೆಯ ಸಂಪರ್ಕದ ಅರುಣಾ ಜಂಕ್ಷನ್ನಲ್ಲಿ ವಾಹನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸಾಮಾನ್ಯ ನಿಧಿಯನ್ನು ಬಳಸಿ ಜಂಕ್ಷನ್ ಅಭಿವೃದ್ಧಿ ಮಾಡುವ ಯೋಜನೆಗೆ ಸಂಬಂಧಿಸಿ ನ.11ರಂದು ಬೆಳಗ್ಗೆ ಸ್ಥಳ ಪರಿಶೀಲನೆ ನಡೆಯಿತು.ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರ ನೇತೃತ್ವದಲ್ಲಿ ಈ ಕೆಲಸ ನಡೆದಿದೆ.



ಅರುಣಾ ಜಂಕ್ಷನ್ ಅಗಲ ಕಿರಿದಾಗಿರುವುದರಿಂದ ಇಲ್ಲಿ ಅತಿಯಾದ ವಾಹನ ದಟ್ಟಣೆ,ಟ್ರಾಫಿಕ್ ಜಾಮ್ ಆಗುತ್ತಲೇ ಇರುತ್ತದೆ.ಇದರ ಜೊತೆಗೆ ಇಲ್ಲಿ ಪಾದಚಾರಿಗಳು ನಡೆದಾಡಲು ಪರದಾಡುತ್ತಿದ್ದಾರೆ.ಇವೆಲ್ಲವನ್ನೂ ಪರಿಹರಿಸಿ, ವಾಹನ ಸಂಚಾರ ಸುಗಮಗೊಳಿಸುವ, ದಟ್ಟಣೆ ಕಡಿಮೆ ಮಾಡಿ ಸುರಕ್ಷತೆ ಹೆಚ್ಚಿಸುವ ಮತ್ತು ನಗರ ಸಂಪರ್ಕ ಸುಧಾರಿಸುವ ದೃಷ್ಠಿಯಿಂದ ನಗರ ಯೋಜನಾ ಪ್ರಾಧಿಕಾರದ ಸಾಮಾನ್ಯ ನಿಧಿಯನ್ನು ಬಳಸಿ ಈ ಜಂಕ್ಷನ್ ಅಭಿವೃದ್ಧಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.





ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ನ ಕಾರ್ಯದರ್ಶಿ ವೆಂಕಟ್ರಾಜ್, ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಕುಮಾರ್, ಸರ್ವೆಯರ್ ರಾಜಶೇಖರ್, ನಗರಸಭಾ ಇಂಜಿನಿಯರ್ ಮನೋಜ್ ಕುಮಾರ್, ಆದರ್ಶ ಕದ್ರಿ, ಚೇತನ್ ಮತ್ತು ನಗರ ವಿನ್ಯಾಸಗಾರ ಅಜೇಯಕೃಷ್ಣ ಉಪ್ಪಂಗಳ, ನಗರ ಯೋಜನಾ ಪ್ರಾಽಕಾರದ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಲ್ಯಾನ್ಸಿ ಮಸ್ಕರೇನ್ಹಸ್ ಮತ್ತು ಅನ್ವರ್ ಕಾಸಿಂ ಮತ್ತಿತರರು ಉಪಸ್ಥಿತರಿದ್ದರು.
ಇದೀಗ ಈ ಯೋಜನೆ ಪ್ರಾಥಮಿಕ ಹಂತದಲ್ಲಿದ್ದು,ಕೇವಲ ಸ್ಥಳ ಪರಿಶೀಲನೆಯ ಕೆಲಸ ಮಾತ್ರ ಮಾಡಲಾಗಿದೆ.ಮುಂದಿನ ಹಂತದಲ್ಲಿ ಅಂದಾಜು ಪಟ್ಟಿ, ಅಭಿವೃದ್ಧಿಯ ನೀಲನಕ್ಷೆ, ಇಲಾಖಾ ಒಪ್ಪಿಗೆ, ಭೂ ಸ್ವಾಧಿನ ಮಾತುಕತೆ ಮತ್ತು ಪರಸ್ಪರ ಕೊಡುಕೊಳ್ಳುವಿಕೆಯ ಪ್ರಕ್ರಿಯೆಯೂ ನಡೆಯಬೇಕಿರುತ್ತದೆ.ಶಾಸಕರಿಂದ ಈಗಾಗಲೇ ಈ ವಿಚಾರದಲ್ಲಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಗಿದೆ.ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಕರ್ನಾಟಕ ರಾಜ್ಯ ಸರಕಾರ, ನಗರಸಭೆ,ಪ್ರಾಧಿಕಾರದ ಸಹೋದ್ಯೋಗಿಗಳ, ಪತ್ರಕರ್ತ ಬಂಧುಗಳ ಮತ್ತು ಸ್ಥಳೀಯ ಜನರ ಸಹಕಾರ ಅತ್ಯಂತ ಮಹತ್ವಪೂರ್ಣದ್ದಾಗಿದೆ.ಇವರೆಲ್ಲರ ಜೊತೆ ಪುತ್ತೂರಿನ ಮಹಾಜನತೆ ಈ ಕಾರ್ಯದಲ್ಲಿ ಪ್ರಾಧಿಕಾರದ ಜೊತೆ ಸಹಕರಿಸಿ ಯೋಜನೆಯ ಯಶಸ್ಸಿಗೆ ಸಹಕರಿಸುವಂತೆ ವಿನಂತಿ.
-ಅಮಳ ರಾಮಚಂದ್ರ
ಅಧ್ಯಕ್ಷರು,ಪುತ್ತೂರು ನಗರ ಯೋಜನಾ ಪ್ರಾಧಿಕಾರ









