





ಪುತ್ತೂರು : ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಮಕ್ಕಳ ದಿನಾಚರಣೆಯನ್ನು ನವೆಂಬರ್ 14ರಂದು ಆಚರಿಸಲಾಯಿತು.



ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ ಇವರು; ಮಕ್ಕಳು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಅದರಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಹೇಳುತ್ತಾ, ಮಕ್ಕಳಿಗೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯವನ್ನು ಕೋರಿದರು. ನಿತ್ಯ ಪ್ರಾರ್ಥನೆಯನ್ನು ಶಿಕ್ಷಕರು ನೆರವೇರಿಸಿದರು . ಶಾಲಾ ಶಿಕ್ಷಕಿ ಮಲ್ಲಿಕಾ ಹಿತನುಡಿಗಳನ್ನಾಡಿದರು.





ಬಳಿಕ ಸಾಂಸ್ಕೃತಿಕ ಕ್ಲಬ್ ನ ವಿದ್ಯಾರ್ಥಿಗಳು ನೃತ್ಯವನ್ನು ಪ್ರದರ್ಶಿಸಿದರು ಮತ್ತು ಶಿಕ್ಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತದನಂತರ ಮಕ್ಕಳಿಂದ ತರಗತಿವಾರು ವಿವಿಧ ರೀತಿಯ ಪ್ರತಿಭಾ ಪ್ರದರ್ಶನಗಳು ನಡೆದವು.

ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.










