ಕರ್ನಪ್ಪಾಡಿ; ಕೊಡಮಣಿತ್ತಾಯ ದೈವಸ್ಥಾನ ಜೀರ್ಣೋದ್ಧಾರ- ಪ್ರತಿಷ್ಟಾ ಸಮಿತಿ ರಚನೆ

0

ನಿಡ್ಪಳ್ಳಿ; ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕರ್ನಪ್ಪಾಡಿ ನಿಡ್ಪಳ್ಳಿ ಇಲ್ಲಿ ಶ್ರೀ ಕೊಡಮಣಿತ್ತಾಯ ದೈವಸ್ಥಾನ ನಿರ್ಮಾಣದ ಸಲುವಾಗಿ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾ ಸಮಿತಿ ರಚನಾ ಸಭೆಯು ನ.14 ರಂದು  ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕರ್ನಪ್ಪಾಡಿ ಇದರ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಕೊಡಮಣಿತ್ತಾಯ ದೈವಸ್ಥಾನ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.

 ಸಮಿತಿಯ ಗೌರವಾಧ್ಯಕ್ಷರಾಗಿ ಉದ್ಯಮಿ ಜಯಂತ ನಡುಬೈಲು, ಅಧ್ಯಕ್ಷರಾಗಿ ಉದ್ಯಮಿ ಜನಾರ್ಧನ ಪೂಜಾರಿ ಪದಡ್ಕ, ಕಾರ್ಯಾಧ್ಯಕ್ಷರಾಗಿ ಅಶ್ವಥ ಪೂಜಾರಿ ಕರ್ನಪ್ಪಾಡಿ, ಉಪಾಧ್ಯಕ್ಷರಾಗಿ ಶೀನಪ್ಪ ಪೂಜಾರಿ ಕರ್ನಪ್ಪಾಡಿ, ರಾಜೇಶ್ ಪೂಜಾರಿ ಆರ್ಲಪದವು, ಶೀನಪ್ಪ ಪೂಜಾರಿ ಕುಕ್ಕುಪುಣಿ, ಪದ್ಮನಾಭ ಕುಲಾಲ್ ಜ್ಯೋತಿ ನಿಲಯ ಗುರಿ, ಉದಯ ಪೂಜಾರಿ ಅರಂಭ್ಯ, ಕಾರ್ಯದರ್ಶಿಯಾಗಿ ರಾಧಾಕೃಷ್ಣ . ಆರ್ ಕೋಡಿ, ಕೋಶಾಧಿಕಾರಿ ಯಾಗಿ ರಾಜೇಶ್ ಎನ್ ನೆಲ್ಲಿತ್ತಡ್ಕ,  ಜತೆ ಕಾರ್ಯದರ್ಶಿಗಳಾಗಿ ಸಂತೋಷ್ ಪೂಜಾರಿ ಕಾನ ಕುಕ್ಕುಪುಣಿ, ವಿಜಿತ್ ಕುಮಾರ್ ದೇವಸ್ಯ, ಪೂಜಿತ್ ಕರ್ನಪ್ಪಾಡಿ, ಸಂಚಾಲಕರುಗಳಾಗಿ ಹರೀಶ್ ಪೂಜಾರಿ ದೇವಸ್ಯ ಹೊಸಮನೆ, ದಯಾನಂದ ಪೂಜಾರಿ ಕರ್ನಪ್ಪಾಡಿ, ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಚಿತ್ ಕುಮಾರ್ ರೆಂಜ, ಭಾಸ್ಕರ ಕರ್ಕೇರ ನುಳಿಯಾಲು, ಲೋಕೇಶ್ ಪೂಜಾರಿ ಕರ್ನಪ್ಪಾಡಿ, ಸುರೇಶ್ ಪೂಜಾರಿ ಬೊಳ್ಳಿಂಬಲ ಆರ್ಲಪದವು,  ನಾರಾಯಣ ಪೂಜಾರಿ ತೂಂಬಡ್ಕ, ಪ್ರಖ್ಯಾತ್ ಸಾಲ್ಯಾನ್ ನುಳಿಯಾಲು,ಮನೋಹರ ನುಳಿಯಾಲು, ವಸಂತ ಗೌಡ ಕರ್ನಪ್ಪಾಡಿ, ಸತೀಶ್ ಕರ್ನಪ್ಪಾಡಿ, ಕುಮಾರ ನರಸಿಂಹ ಭಟ್ ಬುಳೆನಡ್ಕ, ಬಿಪಿನ್ ಸಾಲ್ಯಾನ್ ನೆಲ್ಲಿತ್ತಡ್ಕ, ಸಂತೋಷ್ ಕುಮಾರ್ ಬೇರಿಕೆ  ಹಾಗೂ ಹಲವರನ್ನು ಸದಸ್ಯರುಗಳಾಗಿ ಸರ್ವಾನುಮತದಿಂದ ಆರಿಸಲಾಯಿತು.       

 ಸಮಿತಿ ರಚನೆ ನಂತರ  ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ ಮಾತನಾಡಿ ಎಲ್ಲರೂ ಒಟ್ಟಾಗಿ ಕೊಡಮಣಿತ್ತಾಯ ದೈವದ ಕೆಲಸಕ್ಕೆ ಶ್ರಮಿಶೋಣ ಎಂದರು. ಗೌರವಾಧ್ಯಕ್ಷ ಜಯಂತ ನಡುಬೈಲು ಮಾತನಾಡಿ ಊರ ಮತ್ತು ಪರ ಊರ ಭಕ್ತಾದಿಗಳ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದರು. ಸಭೆಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ  ಕಾರ್ಯದರ್ಶಿ ಮಾಧವ ಪೂಜಾರಿ ರೆಂಜ ಮತ್ತು  ಸದಸ್ಯರು ಉಪಸ್ಥಿತರಿದ್ದರು. ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿ, ರಾಧಾಕೃಷ್ಣ ಆರ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here