





ಡಿ.12: ಶ್ರೀ ಮಹಾದೇವಿ ಕಲಾಮಂದಿರದಲ್ಲಿ ಕಾರ್ಯಕ್ರಮ


ವಿಟ್ಲ: ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ವತಿಯಿಂದ ಡಿ.12ರಂದು ಕಬಕ ಶ್ರೀ ಮಹಾದೇವಿ ಕಲಾಮಂದಿರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಆಮಂತ್ರಣ ಪತ್ರವನ್ನು ಶ್ರೀ ಮಹಾದೇವಿ ಯುವಕ ಮಂಡಲದ ಖಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.





ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ರಾಜ ವಿದ್ಯಾಪುರ, ಶ್ರೀ ಮಹಾದೇವಿ ಉತ್ಸವ ಸಮಿತಿ ಅಧ್ಯಕ್ಷರು ಪ್ರಶಾಂತ್ ಮೂವಳ, ಕಾರ್ಯದರ್ಶಿ ಈಶ್ವರ ಪುಳಿತ್ತಾಡಿ, ಯುವಕ ಮಂಡಲದ ಮಾಜಿ ಅಧ್ಯಕ್ಷರು ಜಯರಾಮ್ ನೆಕ್ಕರೆ, ಲೋಕೇಶ್ ಬಾಕಿಮಾರ್,ರಕ್ಷಿತ್ ಅಡ್ಯಾಲು, ಮಾಜಿ ಕಾರ್ಯದರ್ಶಿ ಯತೀಶ್ ಪದ್ನಡ್ಕ, ಯುವಕ ಮಂಡಲದ ಸದಸ್ಯರಾದ ಪವನ್ ಕಳಮೆಮಜಲು, ನಾಗೇಶ್ ಪದೆಂಜಾರು, ಪ್ರಶಾಂತ್ ಕಳಮೆಮಜಲು ಉಪಸ್ಥಿತರಿದ್ದರು. ಶ್ರೀ ಮಹಾದೇವಿ ಉತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷರ ದರ್ನಪ್ಪ ಸೀಗೆತ್ತಾಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದಾಸ್ ಮೂವಳ ವಂದಿಸಿದರು.










