ನ.20: ವಿದ್ಯುತ್ ನಿಲುಗಡೆ

0

ಪುತ್ತೂರು: ತುರ್ತು ಕಾಮಗಾರಿ ಮತ್ತು ನಿರ್ವಹಣಾ ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಪುತ್ತೂರು ಟೌನ್ ಓಲ್ಡ್, ದರ್ಬೆ, ಉಪ್ಪಿನಂಗಡಿ ಎಕ್ಸ್ಪ್ರೆಸ್, ಕಾಂಚನ ಮತ್ತು ವಾಟರ್‌ಸಪ್ಲೈ ಫೀಡರ್‌ನಲ್ಲಿ ನ.20ರಂದು ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ 5.30ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.


ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಹಾರಾಡಿ, ಬೊಳ್ವಾರು, ಪೋಸ್ಟ್ ಆಫೀಸ್ ಹತ್ತಿ, ಮಿನಿ ವಿಧಾನ ಸೌಧ, ಕೋರ್ಟ್ ರೋಡ್, ಚಿಕ್ಕಪುತ್ತೂರು, ಪ್ರೈವೇಟ್ ಬಸ್‌ಸ್ಟ್ಯಾಂಡ್, ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್, ಏಳ್ಮುಡಿ, ಕಲ್ಲಾರೆ, ಬೊಳ್ವಾರು, ದರ್ಬೆ, ಅಶ್ವಿನಿ ಸರ್ಕಲ್, ಬೀರಮಲೆ ಗುಡ್ಡೆ, ವಾಟರ್ ಸಪ್ಲೈ, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಸೇಡಿಯಾಪು, ಶಾಂತಿನಗರ, ಬಜತ್ತೂರು, ಕೊಲ ಮತ್ತು ನೆಕ್ಕಿಲಾಡಿ ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.


33ಕೆ.ವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ ವಿದ್ಯುತ್ ಮಾರ್ಗ, 33ಕೆ.ವಿ ಪುತ್ತೂರು-ಸವಣೂರು-ನೆಲ್ಯಾಡಿ ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಾರಾಡಿ ಎಂಬಲ್ಲಿ ಮತ್ತು 33ಕೆ.ವಿ ಕಡಬ ವಿದ್ಯುತ್ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಮತ್ತು ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ನ.20 ರಂದು ಪೂರ್ವಾಹ್ನ 9.30 ರಿಂದ ಸಾಯಂಕಾಲ 05:30 ಗಂಟೆಯವರೆಗೆ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ 33ಕೆ.ವಿ ಪುತ್ತೂರು-ಸವಣೂರು-ನೆಲ್ಯಾಡಿ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆವಿ ಕಡಬ ವಿದ್ಯುತ್ ಉಪಕೇಂದ್ರ ಮತ್ತು 33/11ಕೆವಿ ಬಿಂದು ಹಾಗೂ 33/11ಕೆವಿ ಕಡಬದಿಂದ ಹೊರಡುವ ಹೊರಡುವ ಎಲ್ಲಾ 11ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here