





ಉಪ್ಪಿನಂಗಡಿ : ಇಲ್ಲಿನ ಶಾಲಾ ರಸ್ತೆಯಲ್ಲಿ ವೆಂಕಟರಮಣ ಪ್ರಸಾದ್ ಬಿಲ್ಡಿಂಗ್ ನಲ್ಲಿ ಖ್ಯಾತ ಸ್ಕಿನ್ ಸ್ಪೆಷಾಲಿಸ್ಟ್ ಡಾ. ಸುವೀರ್ ಎಂ ರವರ ಆರೋಗ್ಯ ಹೆಲ್ತ್ ಕ್ಲಿನಿಕ್ ನ.21ರಂದು ಶುಭಾರಂಭಗೊಂಡಿತು.



ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಉದ್ಯಮಿ ವಜ್ರ ಕುಮಾರ್ ಜೈನ್ , ಬೆಳೆಯುತ್ತಿರುವ ಪಟ್ಟಣವಾದ ಉಪ್ಪಿನಂಗಡಿಯಲ್ಲಿ ಆರೋಗ್ಯ ಹೆಲ್ತ್ ಕ್ಲಿನಿಕ್ ಶುಭಾರಂಭದೊಂದಿಗೆ ಚರ್ಮ ರೋಗಕ್ಕೆ ಸಂಬಂಧಿಸಿ ತಜ್ಞ ವೈದ್ಯರ ಕೊರತೆಯನ್ನು ನೀಗಿಸಿದಂತಾಗಿದೆ. ಮಾತ್ರವಲ್ಲದೆ ಖ್ಯಾತ ಸ್ಕಿನ್ ಸ್ಪೆಷಾಲಿಸ್ಟ್ ಆಗಿ ಹೆಗ್ಗಳಿಕೆ ಪಡೆದಿರುವ ಯುವ ವೈದ್ಯ ಡಾ. ಸುವೀರ್ ಎಂ ರವರ ಸೇವೆ ಇಲ್ಲಿ ಲಭಿಸುತ್ತಿರುವುದು ಸಂತಸದಾಯಕವೆನಿಸಿದೆ ಎಂದರು.





ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿಯ ಖ್ಯಾತ ವೈದ್ಯ ಡಾ. ನಿರಂಜನ್ ರೈ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಬಗೆಯ ಸೇವೆಗಳು ಈ ಊರಿನಲ್ಲಿ ಲಭಿಸುವಂತಾದರೆ ಅದು ಈ ಊರಿನ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ದಂತ ವೈದ್ಯ ಡಾ ರಾಜಾರಾಮ ಕೆ ಬಿ ಮಾತನಾಡಿ ಪ್ರಕೃತಿಯಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ಮೊದಲು ಅದು ಚರ್ಮವನ್ನು ಕಾಡುವುದು. ಈ ನಿಟ್ಟಿನಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗೆ ಉಪ್ಪಿನಂಗಡಿಯಲ್ಲಿ ನುರಿತ ವೈದ್ಯರ ಸೇವೆ ಲಭಿಸುವಂತಾಗಿರುವುದು ಸಂತಸದ ವಿದ್ಯಾಮಾನವೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಿನಂಗಡಿ ಕೇಂದ್ರ ಮಾಲಿಕುದ್ದೀನಾರ್ ಮಸೀದಿಯ ಆಡಳಿತ ಮಂಡಳಿಯ ಶುಕೂರ್ ಹಾಜಿ, ಡಾ.ಅಶೋಕ್ ಪಡಿವಾಳ್ , ಡಾ. ರಮ್ಯ ರಾಜಾರಾಮ್ , ನೋಟರಿ ಅಡ್ವೋಕೇಟ್ ಅರವಿಂದ್ ಕೆ ಭಂಡಾರಿ , ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಗಣ್ಯರಾದ ಡಾ. ಎಂ ಎನ್ ಭಟ್, ಡಾ ವಿಷ್ಣುಪ್ರಸಾದ್, ಡಾ. ಅಮೃತಾ ವೆಂಕಟಕೃಷ್ಣ ಶೆಣೈ, ಡಾ. ಅಜಯ್, ಡಾ. ಸ್ವಾತಿ ಅಜಯ್, ಡಾ.ಸಂತೋಷ್ , ರಾಜೇಶ್ ಪ್ರಭು, ವಿವೇಕಾನಂದ ಪ್ರಭು, ಕೈಲಾರ್ ಸತ್ಯನಾರಾಯಣ ಭಟ್ , ವಿದ್ಯಾಧರ ಜೈನ್ , ಯು ಜಿ ರಾಧಾ, ಪಾರ್ಶ್ವನಾಥ ಜೈನ್ , ಸ್ವರ್ಣೇಶ್ ಗಾಣಿಗ, ವಿನಯ್ ಕುಮಾರ್, ಸಚಿನ್ , ಪ್ರಶಾಂತ್ ಜೈನ್ ಬಾರ್ಯ, ಶಾಂತಾರಾಮ ಕಾಂಚನ, ಶಿವಪ್ರಸಾದ್ , ರಾಮ್ ಪ್ರಸಾದ್, ಸುದಶನ್ ಮತ್ತಿತರರು ಭಾಗವಹಿಸಿ ಶುಭಕೋರಿದರು.
ಉದ್ಯಮಿ ಧನ್ಯಕುಮಾರ್ ರೈ ಸ್ವಾಗತಿಸಿ , ಯುವ ಉದ್ಯಮಿ ಅನುದೀಪ್ ರೈ ವಂದಿಸಿದರು. ವೈದ್ಯರಾದ ಡಾ. ಸುವೀರ್ ಎಂ ಸರ್ವರ ಸಹಕಾರ ಕೋರಿದರು.









