






ಬೆಟ್ಟಂಪಾಡಿ: ಇಲ್ಲಿನ ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದ ೨೮ ನೇ ವರ್ಷದ ವಾರ್ಷಿಕೋತ್ಸವ, ನಗರ ಭಜನಾ ಮಂಗಳೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಡಿ.21ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ನ.16ರಂದು ಮಂದಿರದ ಆವರಣದಲ್ಲಿ ನಡೆಯಿತು. ಶ್ರೀ ವಿಘ್ನೇಶ್ವರ ಅರ್ಥ್ ಮೂವರ್ಸ್ ಮ್ಹಾಲಕ ಸುರೇಶ್ ಕುಮಾರ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.


ಈ ವೇಳೆ ಅಯ್ಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ಕಾರ್ಯದರ್ಶಿ ಕೃಷ್ಣಪ್ಪ ಗುರುಸ್ವಾಮಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಗೌಡ ಪಾರ, ಪ್ರಧಾನ ಕಾರ್ಯದರ್ಶಿ ಅಂಕಿತ್ ಕೋನಡ್ಕ, ಕೋಶಾಧಿಕಾರಿ ರವಿನಾಥ ಕೋನಡ್ಕ, ಅಯ್ಯಪ್ಪ ಮಾಲಾಧಾರಿಗಳು, ಭಕ್ತ ವೃಂದ ಉಪಸ್ಥಿತರಿದ್ದರು.













